ಜಗಳದಲ್ಲಿ ಗಾಯಗೊಂಡಿದ್ದವ ಸಾವು

Manjunath Bhovivaddar died
Published on

ಮುಂಡಗೋಡ: ಇಬ್ಬರ ನಡುವೆ ಜಗಳ ನಡೆದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೇ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಸಾವನ್ನಪ್ಪಿದ ಘಟನೆ ಮಂಗಳವಾರ ಜರುಗಿದೆ.

ತಾಲೂಕಿನ ನ್ಯಾಸರ್ಗಿ ಗ್ರಾಮದ ಮಂಜುನಾಥ ದುರ್ಗಪ್ಪ ಭೋವಿವಡ್ಡರ (57) ಸಾವನ್ನಪ್ಪಿದವ. ಸೆ. 17ರಂದು ಗ್ರಾಮದಲ್ಲಿ ಹನುಮಂತ ಭೀಮಣ್ಣ ಹರಪನಹಳ್ಳಿ ಹಾಗೂ ಮಂಜುನಾಥ ದುರ್ಗಪ್ಪ ಭೋವಿ ಮಧ್ಯೆ ಜಗಳವಾಗಿತ್ತು. ಈ ವೇಳೆ ಹನುಮಂತನು ಮಂಜುನಾಥನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ತಲೆಗೆ ಹಾಗೂ ಕೈಗೆ ತೀವ್ರ ಗಾಯಗೊಳಿಸಿದ್ದ. ಮಂಜುನಾಥನಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಂಜುನಾಥ ಮಂಗಳವಾರ ಸಾವನ್ನಪ್ಪಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್‌ಪಿ ಭೇಟಿ: ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಶಿರಸಿ ಡಿವೈಎಸ್‌ಪಿ ಗಣೇಶ ಕೆ.ಎಲ್., ಸಿಪಿಐ ಬಿ.ಎಸ್. ಲೋಕಾಪುರ ಅವರು ನ್ಯಾಸರ್ಗಿ ಗ್ರಾಮದ ಮೃತ ವ್ಯಕ್ತಿಯ ಮನೆಗೆ ಭೇಟಿ ನೀಡಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net