

ಹುಬ್ಬಳ್ಳಿ: ಭೂ ನಗರ ಸಾರಿಗೆ ಇಲಾಖೆ ನಿರ್ದೇಶನದನ್ವಯ ಇಲ್ಲಿಯ ಕಿಮ್ಸ್ ಮುಂದಿನ ಆಂಜನೇಯ ದೇವಸ್ಥಾನ (ಹಳೇದು)ವನ್ನು ಮಂಗಳವಾರ ತೆರವುಗೊಳಿಸಲಾಯಿತು.
ಬಿಆರ್‌ಟಿಎಸ್ ರಸ್ತೆ ವಿಸ್ತರಣೆ ಸಂಬಂಧ ನಡೆಯುತ್ತಿರುವ ಕಾಮಗಾರಿಗಾಗಿ ಮೂರೂವರೆ ಮೀಟರ್ ಜಾಗ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈದನ್ನು ಮನಗಂಡು ಕಳೆದ ತಿಂಗಳು ಹೊಸದಾಗಿ ದೇವಸ್ಥಾನ ಕಟ್ಟಿಸಿಕೊಟ್ಟು ಅಲ್ಲಿಯೇ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಹಳೆಯ ಕಟ್ಟಡ ಹಾಗೆಯೇ ಬಿಟ್ಟಿದ್ದರಿಂದ ಕಿಡಿಗೇಡಿಗಳು ಅದಕ್ಕೆ ಬೇರೆ ಸ್ವರೂಪ ಕೊಡಬಹುದು ಎಂಬ ಹಿನ್ನೆಲೆಯಲ್ಲಿ ಬಿಆರ್‌ಟಿಎಸ್ ಇಂಜಿನಿಯರ್ ಬಾಬುಗೌಡ ಪಾಟೀಲ ನೇತೃತ್ವದಲ್ಲಿ ತೆರವು ಕಾರ್ಯ ನಡೆಯಿತು. ಇದಕ್ಕೆ ವಿದ್ಯಾನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಜಯಂತ ಗೌಳಿ ನೇತೃತ್ವದ ಸಿಬ್ಬಂದಿ ಕಾವಲಿತ್ತು.