ಅವ್ಯವಸ್ಥೆಗೆ ಬೆಚ್ಚಿಬಿದ್ದ ಅಧಿಕಾರಿ..!

The officer was shocked by the chaos..!
ಘಾಳಪೂಜಿಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ತಹಸೀಲ್ದಾರ್​ ಬಲರಾಮ ಕಟ್ಟಿಮನಿ ಭೇಟಿ ನೀಡಿ ಅವ್ಯವಸ್ಥೆ ಪರಿಶೀಲಿಸಿದರು. ವೆಂಕಟೇಶ ಅಂಬಿಗೇರ, ಮಲ್ಲು ತಳವಾರ ಇದ್ದರು.
Published on

ಮುದ್ದೇಬಿಹಾಳ: ವಸತಿ ನಿಲಯದ ಕೊಠಡಿಯೊಂದರಲ್ಲಿ ಬೆಂಕಿ ಅವಡ, "ಡಿ' ದರ್ಜೆ ಮಹಿಳಾ ಸಿಬ್ಬಂದಿ ಅನುಮಾನಾಸ್ಪದ ಸಾವು, ವಿದ್ಯಾರ್ಥಿನಿಗೆ ಕಂಪೌಂಡ್​ ಪಕ್ಕದಲ್ಲೇ ಬಲವಂತವಾಗಿ ತಾಳಿ ಕಟ್ಟಿದ ವಿಡಿಯೋ ವೈರಲ್​ ಮಾಡಿದ್ದ ಟನೆಗಳಿಂದ ರಾಜ್ಯವ್ಯಾಪಿ ಖ್ಯಾತಿಗೆ ಕಾರಣವಾಗಿರುವ ಘಾಳಪೂಜಿ ಗ್ರಾಮದಲ್ಲಿನ ಮುರಾರ್ಜಿ ದೇಸಾಯಿ ವಸತಿ (ಎಂಡಿಆರ್​) ಶಾಲೆಗೆ ದಿಢೀರ್​ ಭೇಟಿ ನೀಡಿದ ತಹಸೀಲ್ದಾರ್​ ಬಲರಾಮ ಕಟ್ಟಿಮನಿ ಅಲ್ಲಿನ ಅವ್ಯವಸ್ಥೆಗೆ ಬೆಚ್ಚಿ ಬಿದ್ದು ವಾರ್ಡನ್​, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಟನೆ ಗುರುವಾರ ನಡೆದಿದೆ.

ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ತಮಗೆ ಬಂದಿದ್ದ ಸೂಚನಾ ಪತ್ರದ ಅನ್ವಯ ವಾಸ್ತವ ಮಾಹಿತಿ ಸಂಗ್ರಹಿಸಲು ಬಂದಿದ್ದ ಅವರು ಶೌಚಾಲಯಗಳಲ್ಲಿನ ಅಸ್ವಚ್ಛತೆ ಕಂಡು ವಿದ್ಯಾರ್ಥಿಗಳು ಹೇಗೆ ವಾಸ ಮಾಡಬೇಕು? ಎಂದು ವಾರ್ಡನ್​ ವಿರುದ್ಧ ಗರಂ ಆದರು.

ಅಗ್ನಿ ಅವಡ ಸಂಭವಿಸಿದ ವಸತಿ ನಿಲಯದ ಕೊಠಡಿಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳಿಗೆ ಮಾತನಾಡಿಸಿ ವಾಸ್ತವ ಪರಿಸ್ಥಿತಿ ತಿಳಿದುಕೊಂಡರು. ಮಕ್ಕಳಿಗೆ ಕೊಡುವ ಆಹಾರದ ವಿವರಣೆ ಪಡೆದ ಅವರು, ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇರಿ ಮೆನು ಪ್ರಕಾರ ತಿಂಡಿ, ತಿನಿಸು, ಗುಣಮಟ್ಟದ ಆಹಾರ ಕೊಡುವ ಕುರಿತು ವಿಚಾರಿಸಿದಾಗ ಲೋಪ ಇರುವುದು ಗೊತ್ತಾಯಿತು. ಮಕ್ಕಳಿಗೆ ಸರ್ಕಾರದಿಂದ ಬರುವ ಬೆಡ್​ಶೀಟ್​, ಶೂ, ದಿನಬಳಕೆ ಸಾಮಗ್ರಿ ಸರಿಯಾಗಿ ವಿತರಣೆ ಆಗುತ್ತಿಲ್ಲ ಎನ್ನುವುದನ್ನು ದಾಖಲಿಸಿಕೊಂಡರು.

ಸರಿಯಾದ ಸಿಬ್ಬಂದಿ ಇಲ್ಲ. ಮೂಲ ಸೌಕರ್ಯಗಳ ಕೊರತೆೆ. ಶಿಸ್ತು ನಿಯಮ ಪಾಲನೆ ಆಗುತ್ತಿಲ್ಲ. ವಿದ್ಯಾರ್ಥಿನಿಯರ ಸಮಸ್ಯೆ ಕೇಳಲು ಮಹಿಳಾ ಸಿಬ್ಬಂದಿ ಇಲ್ಲ. "ಡಿ' ದರ್ಜೆ, ಆರೋಗ್ಯ ಸಿಬ್ಬಂದಿಯೇ ಎಲ್ಲವನ್ನೂ ನಿಭಾಯಿಸುವ ದುಸ್ಥಿತಿ ಇದೆ. ಅಡುಗೆಗೆ ಬಳಸುವ ಕಾಯಿಪಲ್ಯೆಯೂ ಗುಣಮಟ್ಟದಲ್ಲಿಲ್ಲ. ಸರ್ಕಾರದ ಸೌಲಭ್ಯ ವಿತರಣೆಯಾಗಿಲ್ಲ. ಇದೆಲ್ಲ ಅವ್ಯವಸ್ಥೆಗೆ ಕಾರಣ ನೀಡಬೇಕು ಎಂದು ವಾರ್ಡನ್​ ಬಾಲಚಂದ್ರ ಮೇಟಿ ಅವರಿಗೆ ತಹಸೀಲ್ದಾರ್​ ಸೂಚಿಸಿದರು.

ಈ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವಂತೆ ತಮ್ಮ ಜೊತೆ ಬಂದಿದ್ದ ಕಂದಾಯ ನಿರೀಕ ವೆಂಕಟೇಶ ಅಂಬಿಗೇರಗೆ ಸೂಚಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ್​, ಸಾಕಷ್ಟು ಸಮಸ್ಯೆಗಳಿರುವುದು ಕಂಡು ಬಂದಿದೆ. ಪರಿಶೀಲನೆಯಲ್ಲಿ ಕಂಡು ಬಂದ ಅಂಶಗಳ ಕುರಿತು ಮೇಲಾಧಿಕಾರಿಗಳಿಗೆ, ಆಯೋಗಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.

ಜಿಲ್ಲಾ ಪರಿಶಿಷ್ಟ ಜಾತಿ ದೌರ್ಜನ್ಯ ನಿಮೂರ್ಲನಾ ಸಮಿತಿ ನಾಮನಿರ್ದೇಶಿತ ಸದಸ್ಯ ಮಲ್ಲು ತಳವಾರ ಮಾತನಾಡಿ, ಶಾಲೆಯಲ್ಲಿರುವ ಪ್ರಾಂಶುಪಾಲ ಮತ್ತು ಶಿಕರ ನಡುವೆ ಹೊಂದಾಣಿಕೆ ಇಲ್ಲ. ಇಂಥ ಶಾಲೆಗಳ ಮಕ್ಕಳಿಗೆ ಕಾನೂನಿನ ತಿಳವಳಿಕೆ ನೀಡಿ ಧೈರ್ಯ ತುಂಬಬೇಕು. ಕಂಪೌಂಡ್​ ಗೋಡೆ ಎತ್ತರಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net