ಕೊಡಗಿನಿಂದ ಸೈನ್ಯಕ್ಕೆ ಸೇರುವವರ ಸಂಖ್ಯೆ ಇಳಿಮುಖ

4 gkp 03
ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಮೈಸೂರಿನ ವಿಜಯನಗರದಲ್ಲಿ ಆಯೋಜಿಸಿದ್ದ ಕನ್ನಡ ಹಬ್ಬ ಸುವರ್ಣ ಸಂಭ್ರಮ ವರ್ಷಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಪೊನ್ನಂಪೇಟೆ ಜೈ ಜವಾನ್ ಡಿಫೆನ್ಸ್ ಟ್ರೈನಿಂಗ್ ಮತ್ತು ಕೋಚಿಂಗ್ ಅಕಾಡೆಮಿ ವಿದ್ಯಾರ್ಥಿಗಳು. ಅಮ್ಮಣಿಚಂಡ ಲವನ್ ಮಾದಪ್ಪ, ಎನ್.ಎಂ.ಬಶೀರ್, ಕುಪ್ಪಂಡ ರೀನಾ, ಕುಪ್ಪಂಡ ನರೇಂದ್ರ, ಪಾಲಕರಾದ ಚಂದುರ ವೀಟು ಇದ್ದರು.
Published on

ಮಾಜಿ ಯೋಧ ಅಮ್ಮಣಿಚಂಡ ಲವನ್ ಮಾದಪ್ಪ ಬೇಸರ

ಗೋಣಿಕೊಪ್ಪಲು : ಇತ್ತೀಚಿನ ದಿನಗಳಲ್ಲಿ ಕೊಡಗಿನ ಯುವಕರಲ್ಲಿ ಸೈನ್ಯಕ್ಕೆ ಸೇರಲು ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಪೊನ್ನಂಪೇಟೆ ಜೈ ಜವಾನ್ ಡಿಫೆನ್ಸ್ ಮತ್ತು ಕೋಚಿಂಗ್ ಅಕಾಡೆಮಿ ಅಧ್ಯಕ್ಷ, ಬ್ಲ್ಯಾಕ್ ಕ್ಯಾಟ್ ಕಮಾಂಡೋ ಇನ್‌ಸ್ಪೆಕ್ಟರ್, ಮಾಜಿ ಯೋಧ ಅಮ್ಮಣಿಚಂಡ ಲವನ್ ಮಾದಪ್ಪ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಮೈಸೂರಿನ ವಿಜಯನಗರದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಹಬ್ಬ ಸುವರ್ಣ ಸಂಭ್ರಮ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊಡಗು ಭಾರತೀಯ ಸೈನ್ಯಕ್ಕೆ ರಾಜ್ಯದಲ್ಲಿ ಅತ್ಯಂತ ಹೆಚ್ಚು ಸೈನಿಕರನ್ನು ನೀಡಿರುವ ಜಿಲ್ಲೆ, ಆದರೆ ಇತ್ತೀಚಿನ ದಿನಗಳಲ್ಲಿ ಕೊಡಗಿನ ಯುವಕರಲ್ಲಿ ಸೈನ್ಯಕ್ಕೆ ಸೇರಲು ಆಸಕ್ತಿ ಕಡಿಮೆಯಾಗುತ್ತಿದೆ. ಆದ್ದರಿಂದ ಕೊಡಗಿನ ವಿದ್ಯಾರ್ಥಿಗಳನ್ನು ಸೈನ್ಯಕ್ಕೆ ಸೇರುವಂತೆ ಪ್ರೇರೇಪಿಸುವ ಸಲುವಾಗಿ ಈ ಅಕಾಡೆಮಿಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಈ ಮೂಲಕ ದೇಶಕ್ಕಾಗಿ ಕಿರುಕಾಣಿಕೆ ಸಲ್ಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಅಕಾಡೆಮಿ ವಿದ್ಯಾರ್ಥಿಗಳಾದ ಕಳಕಂಡ ಚಂಗಪ್ಪ, ಕಳಕಂಡ ಮೊಣ್ಣಪ್ಪ ಭಾರತಿಯ ವಾಯು ಸೇನೆಗೆ, ಭೂ ಸೇನೆಯ ಪ್ಯಾರಾಸ್ಪೆಷಲ್ ಪೋರ್ಸ್‌ಗೆ ಇಟ್ಟೀರ ಬಿದ್ದಪ್ಪ, ಭಾರತೀಯ ಟೆರಿಟೋರಿಯಲ್ ಆರ್ಮಿಗೆ ಮನೋಜ್ ಹಾಗೂ ಬಿ.ಎಸ್.ಶಯನ್ ಆಯ್ಕೆಯಾಗಿದ್ದಾರೆ. ಅಯ್ಯಪ್ಪ, ಪ್ರದೀಪ್, ಮೋಹಿತ್ ಮಂದಣ್ಣ, ನಿರಾಂತ, ಶುಭಂ ಕುಮಾರ್ ಸಿಂಗ್, ವಿಕಾಶ್, ಪಲ್ಲವಿ, ಜಕ್ಷಿತ ಅಗ್ನಿ ಪಥ್‌ನಲ್ಲಿ ಆಯ್ಕೆಯಾಗಿ ಮೆರಿಟ್ ಲಿಸ್ಟ್ ನಿರೀಕ್ಷೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಸನ್ನಾನ:

ಪೊನ್ನಂಪೇಟೆ ಜೈ ಜವಾನ್ ಡಿಫೆನ್ಸ್ ಟ್ರೈನಿಂಗ್ ಮತ್ತು ಕೋಚಿಂಗ್ ಅಕಾಡೆಮಿಯ ವಿದ್ಯಾರ್ಥಿಗಳಾದ ಪಿ.ಆರ್.ದರ್ಶನ್, ಎಚ್.ಎಂ.ಮನೋಜ್, ಪಿ.ಕೆ.ಸುಬ್ರಮಣಿ, ಬಿ.ಎಸ್.ಶಯನ್ ಅವರಿಗೆ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಕನ್ನಡ ವಿಕಾಸ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಹ ನಿರ್ದೇಶಕ ಸೋಮಯ್ಯ ಕುದುಕುಳಿ ಅವರಿಗೆ ಯೋಗದಲ್ಲಿನ ಸಾಧನೆ ಹಾಗೂ ಸಮಾಜ ಸೇವೆಗಾಗಿ ಕನ್ನಡ ವಿಕಾಸ ಸೇವಾ ರತ್ನ ಪ್ರಶಸ್ತಿ ಮತ್ತು ಸಮಾಜಸೇವಕಿ ಹಾಗೂ ಅಕಾಡೆಮಿ ಕ್ರೀಡಾ ಶಿಕ್ಷಕಿ ಪಡಿಕಲ್ ಕುಸುಮವತಿ ಅವರಿಗೆ ಆದರ್ಶ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೊಡಗು ಎಜುಕೇಷನಲ್ ಸೋಶಿಯಲ್ ಸರ್ವಿಸ್ ಟ್ರಸ್ಟ್ ವತಿಯಿಂದ ಕುಶಾಲನಗರದಲ್ಲಿ ಆಯೋಜಿಸಲಾಗಿದ್ದ, ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ 5ನೇ ಸ್ಥಾನ ಪಡೆದ ಅಕಾಡೆಮಿಯ ವಿದ್ಯಾರ್ಥಿ ತಕ್ಷಿತಾ, ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಾದ ಧ್ಯಾನ್ ಗಣಪತಿ, ದರ್ಶನ್, ಚಿನ್ಮಯಿ, ಮಿರನ್ ಮುತ್ತಣ್ಣ, ಅರೋಮಲ್, ಸುಬ್ರಮಣಿ, ಪ್ರೀತಮ್, ಗಣಿಕ ದೇವಮ್ಮ, ಪ್ರೀತಿ, ರಿಸಿತ ಅವರನ್ನು ಪೊನ್ನಂಪೇಟೆ ಅಕಾಡೆಮಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಅಕಾಡೆಮಿ ವ್ಯವಸ್ಥಾಪಕ ಎನ್.ಎಂ.ಬಶೀರ್, ಅಕಾಡೆಮಿ ಶಿಕ್ಷಕಿ ಕುಪ್ಪಂಡ ರೀನಾ, ಸಂಯೋಜಕ ಕುಪ್ಪಂಡ ನರೇಂದ್ರ, ಪಾಲಕರಾದ ಚಂದುರ ವೀಟು ಹಾಗೂ ಅಕಾಡೆಮಿ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net