ತುಮಕೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1617ಕ್ಕೇರಿಕೆ

corona
Published on

ತುಮಕೂರು: ಜಿಲ್ಲೆಯಲ್ಲಿ ಗುರುವಾರ 81 ಪ್ರಕರಣ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1617ಕ್ಕೇರಿದೆ.

ತುಮಕೂರು 38, ಕುಣಿಗಲ್ 11, ತಿಪಟೂರು 10, ಮಧುಗಿರಿ 8, ಪಾವಗಡ 5, ಗುಬ್ಬಿ 4, ತುರುವೇಕೆರೆ 2, ಹಾಗೂ ಶಿರಾ, ಕೊರಟಗೆರೆ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತಲಾ 1 ಪ್ರಕರಣ ದಾಖಲಾಗಿದ್ದು, 4 ಸಾವು ಆತಂಕ ಹೆಚ್ಚಿಸಿದೆ. 11 ಜನರು ಕರೊನದಿಂದ ಗುಣಮುಖರಾಗಿ ಮನೆಗೆ ತೆರಳಿದರು, ಈವರೆಗೆ 736 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, 844 ಸಕ್ರಿಯ ಪ್ರಕರಣಗಳಿವೆ.

ಗುರುವಾರದ ಸೋಂಕಿತರಲ್ಲಿ 30 ರೋಗ ಲಕ್ಷಣವಿರುವವರು, 51 ರೋಗ ಲಕ್ಷಣವಿಲ್ಲದವರು, ಪ್ರಾಥಮಿಕ ಸಂಪರ್ಕದಿಂದ 5, ದ್ವಿತೀಯ ಸಂಪರ್ಕದಿಂದ 3 ಜನರಿಗೆ ಸೋಂಕು ತಗುಲಿದೆ.

1 ಮಗು ಸೇರಿ 50 ಪುರುಷರು, 29 ಮಂದಿ ಮಹಿಳೆಯರು ಸೋಂಕಿಗೆ ಗುರಿಯಾಗಿದ್ದಾರೆ, ಇದರಲ್ಲಿ 60 ವರ್ಷ ಮೇಲ್ಪಟ್ಟವರೇ 16 ಜನರಿರುವುದು ಗಮನಾರ್ಹವಾಗಿದೆ.

ತುಮಕೂರಿನ ಕೆಎಚ್‌ಬಿ ಕಾಲನಿಯ 55 ವರ್ಷದ ವ್ಯಕ್ತಿ, ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಗ್ಗೆರೆಯ 63 ವರ್ಷದ ವ್ಯಕ್ತಿ, ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನ 63 ವರ್ಷದ ವ್ಯಕ್ತಿ ಹಾಗೂ ಗುಬ್ಬಿ ತಾಲೂಕು ನಿಟ್ಟೂರಿನ 80 ವರ್ಷದ ಮಹಿಳೆ ಗುರುವಾರ ಕರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಮೃತರು ಎಲ್ಲಿಯವರು? : ತುಮಕೂರಿನ ಕೆಎಚ್‌ಬಿ ಕಾಲನಿಯ 55 ವರ್ಷದ ವ್ಯಕ್ತಿ, ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಗ್ಗೆರೆಯ 63 ವರ್ಷದ ವ್ಯಕ್ತಿ, ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನ 63 ವರ್ಷದ ವ್ಯಕ್ತಿ ಹಾಗೂ ಗುಬ್ಬಿ ತಾಲೂಕು ನಿಟ್ಟೂರಿನ 80 ವರ್ಷದ ಮಹಿಳೆ ಗುರುವಾರ ಕರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net