ಶುಕ್ರವಾರ 6 ಪಾಸಿಟಿವ್ ಪ್ರಕರಣ

Published on

ಮೇ 12 ರಿಂದ ಜಿಲ್ಲೆಯಲ್ಲಿ ಕರೊನಾ ಪ್ರಕರಣ ಕಾಣಿಸಿಕೊಂಡಿದ್ದು ಆಲೂರು ತಾಲೂಕಿನಲ್ಲಿ 28, ಅರಕಲಗೂಡು 23, ಅರಸೀಕೆರೆ 70, ಬೇಲೂರು 15, ಚನ್ನರಾಯಪಟ್ಟಣ 237, ಹಾಸನ 157, ಹೊಳೆನರಸೀಪುರ 78, ಸಕಲೇಶಪುರ 8 ಹಾಗೂ ಹೊರ ಜಿಲ್ಲೆಯ 5 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಡಿಎಚ್‌ಒ ಡಾ. ಕೆ.ಎಂ. ಸತೀಶ್‌ಕುಮಾರ್ ಪತ್ರಿಕೆಗೆ ತಿಳಿಸಿದರು.

ಪಿ 19867ರ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಅರಸೀಕೆರೆ ತಾಲೂಕಿನ 51 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ. ನಿರ್ಬಂಧಿತ ವಲಯದಲ್ಲಿದ್ದ ಅರಸೀಕೆರೆಯ 21 ವರ್ಷದ ಯುವಕ, ಕೆಎಸ್‌ಆರ್‌ಟಿಸಿ ನೌಕರ (58)ನಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಿಂದ ಬಂದಿದ್ದ ಚನ್ನರಾಯಪಟ್ಟಣದ 29 ವರ್ಷದ ವ್ಯಕ್ತಿ, ಪಿ 19849ರ ಜತೆಗೆ ಸಂಪರ್ಕ ಹೊಂದಿದ್ದ 55 ವರ್ಷದ ವ್ಯಕ್ತಿ ಹಾಗೂ ಪಿ 28926ರ ಜತೆಗೆ ಸಂಪರ್ಕ ಹೊಂದಿದ್ದ ಹಾಸನದ 44 ವರ್ಷದ ಮಹಿಳೆಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಶುಕ್ರವಾರ 6 ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 621ಕ್ಕೆ ಏರಿಕೆಯಾಗಿದೆ. ಇಲ್ಲಿವರೆಗೆ 390 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 216 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಒಟ್ಟು 15 ಸಾವು ಪ್ರಕರಣ ದಾಖಲಾಗಿದೆ.

ವಿಜಯವಾಣಿ ಸುದ್ದಿಜಾಲ ಹಾಸನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net