ಜಾತಿ ಗಣತಿಯಲ್ಲಿ ಗಾಣಿಗರ ಸಂಖ್ಯೆ ಕಡಿಮೆ: ಗಾಣಿಗರ ಸಮಾಜದ ಮುಖಂಡರ ಬೇಸರ

Published on

ಮೈಸೂರು: ಜಾತಿಗಣತಿ ವರದಿಯಲ್ಲಿ ಶಿವಜ್ಯೋತಿ ಪಣ ಮತ್ತು ಜ್ಯೋತಿ ಪಣ ಗಾಣಿಗರ ಸಂಖ್ಯೆ ತೀರಾ ಕಡಿಮೆ ತೋರಿಸಲಾಗಿದ್ದು, ಸಮರ್ಪಕವಾಗಿ ಮತ್ತೊಮ್ಮೆ ಗಣತಿ ನಡೆಯಬೇಕಾಗಿದೆ ಎಂದು ಜಿಲ್ಲಾ ಶಿವಜ್ಯೋತಿ ಪಣ ಮತ್ತು ಜ್ಯೋತಿ ಪಣ ಗಾಣಿಗರ ಸಮಾಜದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪದಾಧಿಕಾರಿ ಅನಂತು, ರಾಜ್ಯದಲ್ಲಿ ಸಮುದಾಯದ ಸಂಖ್ಯೆ ಸುಮಾರು 8 ರಿಂದ 10 ಲಕ್ಷ ಇದೆ. ಆದರೆ ವರದಿಯಲ್ಲಿ ಕೇವಲ 6 ಲಕ್ಷ ತೋರಿಸಲಾಗಿದೆ. ಇದರಿಂದಾಗಿ ಪ್ರಾತಿನಿಧ್ಯಕ್ಕೆ ಅಡ್ಡಿಯುಂಟಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಸ್ವ-ಕ್ಷೇತ್ರ ವರುಣಾ ಸೇರಿದಂತೆ ರಾಜ್ಯದ ಸುಮಾರು 12 ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ವಾಸ ಮಾಡುತ್ತಿದ್ದಾರೆ. ಆದರೆ, ನಿಖರ ಸಂಖ್ಯೆ ವರದಿ ತೋರಿಸಿಲ್ಲ. ಹೀಗಾಗಿ, ವೈಜ್ಞಾನಿಕವಾಗಿ ವರದಿ ಸಲ್ಲಿಸಬೇಕೆಂದು ಕೋರಿದರು.

ಮುಖಂಡ ಮಾದಶೆಟ್ಟಿ ಮಾತನಾಡಿ, ಸಮುದಾಯದ ಮುಖಂಡರಾದ ಅನಂತು ಮಾಜಿ ಮೇಯರ್ ಸಹ ಆಗಿದ್ದು, ಇವರನ್ನು ಎಂಎಲ್ಸಿ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು. ಮುಖಂಡರಾದ ವೆಂಕಟೇಶ್, ಜಿ.ಸ್ವಾಮಿ, ಆರ್.ರಘು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net