ದಾನಿಗಳ ಸಂಖ್ಯೆ ಹೆಚ್ಚಬೇಕು

P PURA DAANAA 16, (2)
Published on

ಪರಶುರಾಮಪುರ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸ್ಥಳೀಯ ಶ್ರೀಮಂತರು ಕೈಜೋಡಿಸುವ ಬದ್ಧತೆ ಪ್ರದರ್ಶಿಸಬೇಕು ಎಂದು ದಾನಿ ಆಶಾ ಎಂ.ಸಲುಪಯ್ಯ ಹೇಳಿದರು.

ಚಿತ್ರದುರ್ಗ ತಾಲೂಕು ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 225 ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ, ಟೈ, ಬೆಲ್ಟ್ ಇತರ ಕಲಿಕಾ ಸಾಮಾಗ್ರಿ ವಿತರಿಸಿ ಮಾತನಾಡಿದರು.

ದಾನಿಗಳ ಸಂಖ್ಯೆ ಹೆಚ್ಚಾದರೆ ಸರ್ಕಾರಿ ಶಾಲೆಗಳು ಪ್ರಗತಿ ಕಾಣಲಿದ್ದು, ಈ ನಿಟ್ಟಿನಲ್ಲಿ ಸ್ಥಳೀಯ ಹಣವಂತರು ಮುಂದಾಗಬೇಕು ಎಂದರು.

ಬಡ್ತಿ ಮುಖ್ಯಶಿಕ್ಷಕ ಎಚ್.ಹನುಮಂತರೆಡ್ಡಿ, ಸಮೂಹ ಸಂಪನ್ಮೂಲ ವ್ಯಕ್ತಿ ವೆಂಕಟೇಶರೆಡ್ಡಿ, ಶಿಕ್ಷಕರಾದ ಪ್ರದೀಪ್, ಫಜಲ್ ಉನ್ನೀಸಾ, ಗುರುಲಿಂಗಮ್ಮ, ತ್ರಿವೇಣಿ, ದೈಹಿಕ ಶಿಕ್ಷಣ ಶಿಕ್ಷಕ ತಮ್ಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net