ರಾಜ್ಯದಲ್ಲಿ ರಕ್ತದಾನಿಗಳ ಸಂಖ್ಯೆ ಕ್ಷೀಣ: ನಿಶ್ಚಲಾನಂದನಾಥ ಸ್ವಾಮೀಜಿ ಕಳವಳ

swamiji1
Published on

ಬೆಂಗಳೂರು: ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದರೂ ದಿನದಿಂದ ದಿನಕ್ಕೆ ರಕ್ತದಾನಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ವಿಶ್ವಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

ಬಸವೇಶ್ವರನಗರದಲ್ಲಿ ಭಾನುವಾರ ಆಯೋಜಿಸಿದ್ದ ಅಮೂಲ್ಯ ಸ್ವಯಂ ಪ್ರೇರಿತ ರಕ್ತ ಕೇಂದ್ರ ಹಾಗೂ ಡ್ರೀಮ್ ಹೆಲ್ತ್ ಕೇರ್ ಸರ್ವಿಸಸ್‌ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.

ಅಪಘಾತ,ಶಸ್ತ್ರಚಿಕಿತ್ಸೆ ಸಹಿತ ಹಲವು ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗೆ ರಕ್ತ ಅತ್ಯಗತ್ಯ.ತುರ್ತು ಸಂದರ್ಭಗಳಲ್ಲಿ ರಕ್ತದ ಅಲಭ್ಯತೆ, ಕೊರತೆಯಿಂದ ಜೀವ ಹಾನಿಯಾಗುವ ಸಂಭವ ಹೆಚ್ಚು.ರಕ್ತದಾನ ಮಾಡಿದರೆ ಆರೋಗ್ಯ ಹದಗೆಡಲಿದೆ ಮತ್ತು ದೈಹಿಕ ಬಲಹೀನತೆ ಉಂಟಾಗುತ್ತದೆ ಎಂಬ ನಕರಾತ್ಮಕ ಚಿಂತನೆಯಿಂದ ಆರೋಗ್ಯವಂತರು ರಕ್ತದಾನಕ್ಕೆ ಮುಂದಾಗುತ್ತಿಲ್ಲ. ಹಲವು ಬಾರಿ ನಾನು ರಕ್ತದಾನ ಮಾಡಿದ್ದೇನೆ. ರಕ್ತದಾನದಿಂದ ಅನಾರೋಗ್ಯ ಉಂಟಾಗುವುದಿಲ್ಲ. ದೇಹದಲ್ಲಿ ಚೈತನ್ಯ ಮೂಡುತ್ತದೆ. ದಾನಗಳಲ್ಲೇ ಶ್ರೇಷ್ಠವಾಗಿರುವ ರಕ್ತದಾನಕ್ಕೆ ಆರೋಗ್ಯವಂತರು ಆದ್ಯತೆ ನೀಡುವಂತಾಗಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಅಮೂಲ್ಯ ಸ್ವಯಂ ಪ್ರೇರಿತ ರಕ್ತದ ಕೇಂದ್ರ ಹಾಗೂ ಡ್ರೀಮ್ ಹೆಲ್ತ್ ಕೇರ್ ಸರ್ವಿಸಸ್‌ನ ಅಧ್ಯಕ್ಷ ಡಾ. ಎಚ್.ಆರ್.ಪ್ರಶಾಂತ್, ರೋಟರಿ ಬೆಂಗಳೂರು ಬಸವೇಶ್ವರನಗರ ಶಾಖೆ ಅಧ್ಯಕ್ಷ ಜಿ.ಕೃಷ್ಣ, ಲಕ್ಷ್ಮಿ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಎನ್.ರಾಮಚಂದ್ರಯ್ಯ, ಶಾಸಕ ಡಾ. ರಂಗನಾಥ್, ಕನ್ಸಲ್ಟೆಂಟ್ ಸರ್ಜನ್ ಡಾ.ರಘು ನಾಗರಾಜ್, ಜನರಲ್ ಸರ್ಜನ್ ಡಾ. ಟಿ.ಎಚ್.ಆಂಜನಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net