ಹೆಚ್ಚುತ್ತಿದೆ ಅಸ್ಸಾಂ ಕಾರ್ಮಿಕರ ಸಂಖ್ಯೆ

The number of Assam workers is increasing
Published on

ಮಡಿಕೇರಿ:

ಕೊಡಗಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಕಂಡು ಬರುತ್ತಿದ್ದು, ಇದು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯರ ಉದ್ಯೋಗಕ್ಕೆ ಸಂಚಕಾರ ಬಂದಿರುವ ಬಗ್ಗೆ ಕಳವಳ ವ್ಯಕ್ತ ಆಗುತ್ತಿರುವುವುದು ಒಂದು ಕಡೆಯಾದರೆ, ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಇದೆಲ್ಲದಕ್ಕಿಂತಲೂ ಮುಖ್ಯವಾಗಿ ಅಸ್ಸಾಮಿಗರ ರೂಪದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಾಂಗ್ಲಾ ದೇಶೀಯರೂ ಕೊಡಗಿನಲ್ಲಿ ಇದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ. ಬಾಂಗ್ಲಾ ದೇಶದಲ್ಲಿ ನಡೆದ ಕ್ಷಿಪ್ರ ಕ್ರಾಂತಿ ಮತ್ತು ನಂತರದ ಬೆಳವಣಿಗೆಗಳ ಬೆನ್ನಲ್ಲೇ ಅಸ್ಸಾಂ ಮೂಲದವರು ಎಂದುಕೊಂಡು ಜಿಲ್ಲೆಗೆ ಆಗಮಿಸುತ್ತಿರುವ ಕಾರ್ಮಿಕರ ಸಂಖ್ಯೆ ಕಳೆದ ಕೆಲವು ದಿನಗಳಿಂದ ಹೆಚ್ಚಾಗುತ್ತಿರುವ ಬಗ್ಗೆ ವರದಿಯಾಗುತ್ತಿರುವುದು ಈ ಮಾತುಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.

"ಅಸ್ಸಾಮಿಗರು" ಈಗ ಕೊಡಗಿನಲ್ಲಿ ಕೇವಲ ಕಾಫಿ ತೋಟದ ಕಾರ್ಮಿಕರಾಗಿ ಮಾತ್ರ ಉಳಿದುಕೊಂಡಿಲ್ಲ. ಸಂತೆಗಳಲ್ಲಿ ವ್ಯಾಪಾರ ಮಾಡುವುದರಿಂದ ಆರಂಭಿಸಿ ಹೋಂಸ್ಟೇ, ರೆಸಾರ್ಟ್ ಗಳಲ್ಲಿ ರೂಮ್ ಬಾಯ್ ತನಕವೂ ತಮ್ಮ ಕೆಲಸಗಳನ್ನು ವಿಸ್ತರಿಸಿಕೊಂಡಿದ್ದಾರೆ. ಕೃಷಿ, ವ್ಯಾಪಾರ, ಪೇಂಟಿಂಗ್, ಗಾರೆ ಕೆಲಸದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಹೋಟೆಲ್ ಗಳಲ್ಲಿ ಬಾಣಸಿಗರಾಗಿ, ಸಪ್ಲೈಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇದರ ಜತೆಗೆ ಅಕ್ರಮ ಗೋಮಾಂಸ ಮಾರಾಟ, ಕಳವು, ದರೋಡೆ, ಮಾದಕ ವಸ್ತುಗಳ ಮಾರಾಟ, ಅತ್ಯಾಚಾರ, ಹೊಡೆದಾಟದಂತಹ ಪ್ರಕರಣಗಳಲ್ಲೂ ಇಂಥ ಕಾರ್ಮಿಕರ ಹೆಸರು ಕಾಣಿಸಿಕೊಳ್ಳುತ್ತಿರುವುದು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಪೊಲೀಸ್ ಇಲಾಖೆಯೂ ಸಾಕಷ್ಟು ಜಾಗರೂಕತೆ ವಹಿಸಿದ್ದು, ಅಪರಿಚಿತ ಕಾರ್ಮಿಕರಿಗೆ ಸಂಬಂಧಿಸಿದಂತೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ಮಾಡಿದೆ. ಯಾವುದೇ ರೀತಿಯ ಸಂಶಯಗಳು ಬಂದರೂ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಈ ಒಟ್ಟಾರೆ ಬೆಳವಣಿಗೆಗಳ ಬಗ್ಗೆ ವಿಜಯವಾಣಿ ಓದುಗರು ಇಂದಿನ ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಸ್ಸಾಂ ಕಾರ್ಮಿಕರ ಮುಖವಾಡದಲ್ಲಿ ಬಾಂಗ್ಲಾ ಮೂಲದವರು ಕೊಡಗಿನಲ್ಲಿ ಇದ್ದಾರೆ ಎಂಬ ಆತಂಕ ಜಿಲ್ಲೆಯ ಜನರಲ್ಲಿ ಇರುವುದು ಸತ್ಯ. ಹೊರ ರಾಜ್ಯದ ಕಾರ್ಮಿಕರನ್ನು ಲೈನ್ ಮನೆಗೆ ಸೇರಿಸುವ ಮೊದಲು ಅವರ ಅಧಾರ್‌ಕಾರ್ಡ್ ಮತ್ತು ವಿಳಾಸವನ್ನು ಪೊಲೀಸ್ ಠಾಣೆಗೆ ಮಾಲೀಕರೇ ಸಲ್ಲಿಸಬೇಕು. ತಪ್ಪಿದಲ್ಲಿ ಮಾಲೀಕರೇ ಹೊಣೆಗಾರರು ಎಂಬ ಕಾನೂನು ತರಬೇಕು. ಕ್ರಿಮಿನಲ್‌ಗಳು ಕೊಲೆ, ಸುಲಿಗೆ ಮಾಡಿದರೆ ಯಾರು ಜವಾಬ್ದಾರರು ?
ಎಂ.ಟಿ. ಲೋಕೇಶ್, ಕಾಫಿ ಬೆಳೆಗಾರ, ಮಸಗೋಡು ಗ್ರಾಮ

ಅಸ್ಸಾಂನಿಂದ ಬಂದಂಥ ಕಾರ್ಮಿಕರು ಕೊಡಗಿನಲ್ಲಿ ತಮ್ಮ ಪಾರುಪತ್ಯ ಸ್ಥಾಪಿಸಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಕೆಲವು ಕಡೆಗಳಲ್ಲಿ ಅವರ ಗುಂಪು ವರ್ತನೆಗಳನ್ನು ನೋಡಿದರೆ ಕೊಡಗಿನ ಜನತೆ ಅವರ ಬಗ್ಗೆ ಎಚ್ಚರವಾಗಿರಬೇಕು. ಕೆಲವು ಅಸ್ಸಾಂ ಕಾರ್ಮಿಕರು ನಕಲಿ ದಾಖಲೆಗಳನ್ನು ಹೊಂದಿರುವಂತೆ ಕಂಡುಬರುತ್ತಿದ್ದು ಪೊಲೀಸ್ ಇಲಾಖೆ ಕೊಡಗಿನಲ್ಲಿ ಬೀಡು ಬಿಟ್ಟಂಥ ಇಂಥ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ದಾಖಲೆ ಇದ್ದವರಿಗೆ ಮಾತ್ರ ಅವಕಾಶ ನೀಡುವುದು ಒಳಿತು.
ಶೈಲೇಶ್ ಬಿ.ಎಂ., ಕಾಫಿ ಬೆಳೆಗಾರ, ಪಾಕೋಡು, ವಿರಾಜಪೇಟೆ

ಅಸ್ಸಾಂ ಕಾರ್ಮಿಕರ ಸಂಖ್ಯೆ ಜಿಲ್ಲೆಯಲ್ಲಿ ಅಧಿಕವಾಗುತ್ತಿರುವುದು ಕಳವಳದ ಸಂಗತಿಯಾಗಿದೆ. ಕೆಲವು ಸಂದರ್ಭಗಳಲ್ಲಿ ಅವರು ಮಾತನಾಡುವ ಭಾ?ೆಯನ್ನು ಗಮನಿಸಿದರೆ ಬಾಂಗ್ಲಾದ ಭಾ?ೆಯಲ್ಲಿ ವ್ಯವಹರಿಸುತ್ತಾರೆ. ವ?ರ್ದಿಂದ ವ?ರ್ಕ್ಕೆ ಕೊಡಗಿಗೆ ಬರುತ್ತಿರುವಂಥ ಅಸ್ಸಾಂ ಕಾರ್ಮಿಕರ ಕುಟುಂಬಗಳ ಸಂಖ್ಯೆ ಹೆಚ್ಚುತಲೇ ಇದೆ. ಪೊಲೀಸ್ ಇಲಾಖೆ ಜತೆಗೆ ತೋಟದ ಮಾಲೀಕರು ನಿರಂತರ ಸಂಪರ್ಕ ಹೊಂದಿರಬೇಕು. ಕಾರ್ಮಿಕರ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಬೇಕು.
ಸೌಮ್ಯಾ ಎನ್., ಬೇಟೋಳಿ, ವಿರಾಜಪೇಟೆ

ಜಿಲ್ಲೆಯಲ್ಲಿ ಬಾಂಗ್ಲಾ ವಲಸಿಗರಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಾ ಇದೆ. ಜಿಲ್ಲೆಯ ಕಾರ್ಮಿಕರಿಗೆ ಇವರಿಂದ ಕೆಲಸ ಸಿಕ್ಕದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಪ್ರತಿಯೊಬ್ಬರ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಮಾನ್ಯವಾಗಿದೆಯೇ ಎಂದು ನೋಡಬೇಕು. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಟಿ.ಎನ್. ಗೋವಿಂದಪ್ಪ, ಸಂಚಾಲಕ, ಕರ್ನಾಟಕ ದಲಿತ ಸಂಘ?ರ್ ಸಮಿತಿ

ತೋಟದ ಕೆಲಸಕ್ಕೆ ಜನ ಸಿಗದೆ ಸಾಕ?್ಟು ಕ?್ಟ, ನ?್ಟ ಅನುಭವಿಸಿದ್ದೇವೆ. ಬಾಂಗ್ಲಾ ದೇಶದವರಿಗೆ ಅಸ್ಸಾಂನಲ್ಲಿ ಭಾರತೀಯ ಪೌರತ್ವ ನೀಡುವುದು ನಿಲ್ಲಿಸಬೇಕು. ಕಾರ್ಮಿಕರು ಬಂದು ಭಾರತೀಯ ಎನ್ನುವ ದಾಖಲೆ ಕೊಟ್ಟ ಮೇಲೆ, ನಾವು ಅದನ್ನು ಪೊಲೀಸರಿಗೆ ಕೊಟ್ಟಿದ್ದೇವೆ. ಕಾರ್ಮಿಕರು ಒಳ್ಳೆಯವರು ಕೆಟ್ಟವರು ಎನ್ನುವ ಸರ್ಟಿಫಿಕೇಟ್ ಇರುತ್ತಾ ? ಮಾಲೀಕರು ಜಾಗೃತರಾಗಬೇಕು ಅ?್ಟೇ.
ಯಶೋಧ ಅರುಣ್, ತೋಟ ಮಾಲೀಕರು, ಕುಶಾಲನಗರ

ಕಾರ್ಮಿಕರ ಕೊರತೆಯಿಂದ ತೋಟಗಳ ಮಾಲೀಕರಿಗೆ ಕೆಟ್ಟ ಅನುಭವವಾಗಿತ್ತು. ಅದನ್ನು ನೀಗಿಸುವ ನಿಟ್ಟಿನಲ್ಲಿ ಮಧ್ಯವರ್ತಿಗಳು ಅಸ್ಸಾಂ ಮೂಲದ ಕಾರ್ಮಿಕರನ್ನು ಜಿಲ್ಲೆಗೆ ಕರೆ ತಂದಿದ್ದಾರೆ. ತೋಟ ಮಾಲೀಕರು ಬೇರೆ ರಾಜ್ಯದ ಯಾರನ್ನೇ ಕೆಲಸಕ್ಕೆ ಸೇರಿಸಿಕೊಳ್ಳುವ ಮೊದಲು ಕಾರ್ಮಿಕನ ಸಂಪೂರ್ಣ ವಿವರ ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು. ಆ ಮೂಲಕ ಯಾವ ತೋಟದಲ್ಲಿ ಯಾರಿದ್ದಾರೆ ಎ?್ಟು ಜನ ಇದ್ದಾರೆ ಎನ್ನುವ ಅಂಕಿ-ಅಂಶ ದೊರೆಯುತ್ತದೆ. ಅದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸಾಧ್ಯವಾಗುತ್ತದೆ.
ನಟೇಶ್ ಗೌಡ, ಉದ್ಯಮಿ, ಕುಶಾಲನಗರ

ಅಸ್ಸಾಂ ಕಾರ್ಮಿಕರ ಮುಖವಾಡ ಹಾಕಿಕೊಂಡು ಕೊಡಗಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಾಂಗ್ಲಾ ಮೂಲದವರು ನೆಲೆಸಿದ್ದಾರೆ. ಕಾಫಿ ತೋಟಗಳಲ್ಲಿ ಕಡಿಮೆ ವೇತನ ನೀಡಿ ಕೆಲಸ ಮಾಡಿಸಿಕೊಳ್ಳಬಹುದು ಎಂದು ಕೆಲ ಕಾಫಿ ತೊಟಗಳಲ್ಲಿ ಇವರಿಗೆ ಆಶ್ರಯ ನೀಡಿ ಬೆಳೆಸಿದಂತಿದೆ. ಇದೀಗ ಅಸ್ಸಾಂನವರೆಂದು ಹೇಳಿಕೊಂಡು ಬಾಂಗ್ಲದೇಶದವರು ನಮ್ಮ ಕೊಡಗಿನಲ್ಲಿ ನೆಲೆಯೂರುತ್ತಿರುವುದು ಕಳವಳಕಾರಿಯಾಗಿದೆ.
ಪೂರ್ಣಿಮಾ ಕಿರಣ್, ಗ್ರಾಮ ಪಂಚಾಯತಿ ಸದಸ್ಯೆ, ದುಂಡಳ್ಳಿ

ಕೂಲಿ ಕಾರ್ಮಿಕರ ಕೊರತೆ ಮತ್ತು ಕಡಿಮೆ ದಿನಗೂಲಿಯ ಆಸೆಗೆ ಬಲಿಯಾಗಿ ಕೆಲವು ತೋಟದ ಮಾಲೀಕರು ಅಸ್ಸಾಂ ಮೂಲದ ಕಾರ್ಮಿಕರನ್ನು ತಮ್ಮ ಲೈನ್ ಮನೆಗಳಲ್ಲಿ ಇರಿಸಿಕೊಂಡು ಅವರನ್ನು ಬೇರೆ ತೋಟಗಳಲ್ಲಿ ಕೆಲಸಕ್ಕೆ ಕಳಿಸಿ ಕಮಿ?ನ್ ಗಿಟ್ಟಿಸಿ ಕೊಳ್ಳುತ್ತಿದ್ದಾರೆ. ಹಲವಾರು ಮಾಲೀಕರು ಅವರ ದಾಖಲೆಗಳನ್ನು ಪರಿಶೀಲಿಸಿ ಪೊಲೀಸ್ ಠಾಣೆಗೆ ಒದಗಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಪದೇಪದೇ ಅವರ ಊರಿಗೆ ಹೋಗಿ ಮರಳುವಾಗ ಹೊಸಬರನ್ನು ಕರೆತಂದು ಕೆಲಸ ಮಾಡುವುದು ಮಾಮೂಲಿಯಾಗಿದೆ.
ಬೈತಡ್ಕ ಡೆಲ್ವಿ ದೇವಯ್ಯ, ಉಪಾಧ್ಯಕ್ಷ, ಗ್ರಾಮ ಪಂಚಾಯಿತಿ, ಬೆಟ್ಟಗೇರಿ

ಅಸ್ಸಾಂ ಸರ್ಕಾರ ಮೊದಲು ಬಾಂಗ್ಲಾ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಮ್ಮೆ ಅವರು ದೇಶದೊಳಗೆ ನುಗ್ಗಿದರೆಂದರೆ ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಗೆ ತೆರಳುವುದನ್ನು ತಡೆಯುವುದು ಕಷ್ಟ. ಮಂಗಳೂರು, ಬೆಂಗಳೂರು ರೈಲ್ವೇ ನಿಲ್ದಾಣಗಳಲ್ಲಿ ಇಂಥವರ ದಾಖಲೆಗಳನ್ನು ಪರಿಶೀಲಿಸಿ ಬಾಂಗ್ಲಾ ಅಥವಾ ರೋಹಿಂಗ್ಯಾಗಳು ಆದರೆ ಅಲ್ಲಿಯೇ ತಡೆಯುವ ಕೆಲಸ ಆಗಬೇಕು. ಕೊಡಗಿನಲ್ಲಿ ಸಂತೆಗಳಿಗೆ ಬಂದಾಗ ದಾಖಲೆಗಳ ಪರಿಶೀಲನೆ ಆಗಬೇಕು. ತೋಟದ ಮಾಲೀಕರು ಕೂಡ ಜಾಗರೂಕರಾಗಬೇಕು.
ಡಾ. ಸಣ್ಣುವಂಡ ಕಾವೇರಪ್ಪ, ಮಾಜಿ ಉಪಾಧ್ಯಕ್ಷ, ಭಾರತೀಯ ಕಾಫಿ ಮಂಡಳಿ

ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ ಕಾರ್ಮಿಕರು ಹೊರ ರಾಜ್ಯದವರು ಎಂಬ ಕಾರಣಕ್ಕೆ ಕಾರ್ಮಿಕ ಕಾನೂನು ಉಲ್ಲಂಘಿಸಿ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ದುಡಿಸಿಕೊಳ್ಳುವುದು ಮತ್ತು ಅವರಿಗೆ ಸಂಬಳ ನೀಡದೇ, ಹಲ್ಲೆ ಮಾಡುವುದು ನಡೆಯುತ್ತಿದ್ದು ಈ ಸಂಬಂಧ ಇವರುಗಳು ನಮ್ಮಲ್ಲಿ ದೂರು ನೀಡುತ್ತಿದ್ದಾರೆ. ಇವರ ಬಳಿಯ ಎಲ್ಲಾ ದಾಖಲೆಗಳನ್ನು ನಾವು ಪರಿಶೀಲಿಸಿದ್ದೇವೆ. ಇವರು ಹೊರ ರಾಜ್ಯದವರು ಹೊರತು ಹೊರ ದೇಶದವರಲ್ಲ
ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಭಾರತಕ್ಕೆ ಬಂದಿದ್ದರೆ ಅದು ಕೇಂದ್ರ ಸರ್ಕಾರದ ಭದ್ರತಾ ವೈಪಲ್ಯ.
ಮಹಾದೇವ, ಕಾರ್ಮಿಕ ಮುಖಂಡ, ಸಿದ್ದಾಪುರ

ನಮ್ಮ ದೇಶ ಅಥವಾ ವಿದೇಶದಿಂದ ತೋಟಕ್ಕೆ ಯಾರೇ ಕೆಲಸಕ್ಕೆ ಬಂದರೂ ತೋಟದ ಮಾಲೀಕರು ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಕನ್ನಡ ಬಿಟ್ಟು ಬೇರೆ ಯಾವ ಭಾಷೆ ಮಾತನಾಡುವವರು ಒಂದು ದಿನದ ಕೆಲಸಕ್ಕೆ ಬಂದರೂ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಹೀಗೆ ಯಾವುದಾದರೂ ದಾಖಲೆಗಳನ್ನು ತೆಗೆದುಕೊಳ್ಳಬೇಕು. ಯಾರ ಮೇಲೆ ಸಂಶಯ ಬಂದರೂ ಕೂಡಲೇ ಪೊಲೀಸರಿಗೆ ಮಾಹಿತಿ ಕೊಡಬೇಕು.
ಕೆ. ರಾಮರಾಜನ್, ಕೊಡಗು ಎಸ್.ಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net