ಅಪಘಾತ ಸಂಖ್ಯೆ ಇಳಿಮುಖ: ಟ್ರಾಫಿಕ್ ಇನ್‌ಸ್ಪೆಕ್ಟರ್ ಮಾಹಿತಿ

Bel_Accident
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ತಾಲೂಕು ವ್ಯಾಪ್ತಿಯಲ್ಲಿ ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಿದ ಪರಿಣಾಮ ಅಪಘಾತ ಸಂಖ್ಯೆ ಕಡಿಮೆಯಾಗಿದೆ ಎಂದು ಟ್ರಾಫಿಕ್ ಇನ್‌ಸ್ಪೆೆಕ್ಟರ್ ಅರ್ಜುನ್ ಹೇಳಿದರು.

ಮಂಗಳವಾರ ಬೆಳ್ತಂಗಡಿ ಪಪಂ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಹಿರಿಯ ಸದಸ್ಯ ಜಗದೀಶ್ ಡಿ., ನಗರದ ಹಲವೆಡೆ ರಾತ್ರಿ ವೇಳೆ ಟ್ರಾಫಿಕ್ ಪೊಲೀಸರು ರಿಕ್ಷಾ, ಬೈಕ್ ಚಾಲಕರ ಮೇಲೆ ಅನಗತ್ಯ ಪ್ರಕರಣ ದಾಖಲೆ ಮಾಡುತ್ತಾರೆ ಎಂಬ ಆರೋಪಕ್ಕೆ ಅರ್ಜುನ್ ಈ ಪ್ರತ್ಯುತ್ತರ ನೀಡಿದರು.

ಸದಸ್ಯ ಜಗದೀಶ್ ಡಿ. ಮಾತನಾಡಿ, ನಗರ ಅಭಿವೃದ್ಧಿಗೆ 13 ಕೋಟಿ ರೂ. ಮಂಜೂರಾಗಿದ್ದು, ಇದರ ಬಳಕೆ ಸದ್ವಿನಿಯೋಗವಾಗದೆಯೇ ಎಂಬ ಪ್ರಶ್ನೆಗೆ ಮುಖ್ಯಾಧಿಕಾರಿ ರಾಜೇಶ್ ಉತ್ತರಿಸಿ. ಇದಕ್ಕೆ ಜಿಲ್ಲಾಧಿಕಾರಿ ಅನುಮತಿ ಬೇಕಾಗಿದೆ ಎಂದು ಪ್ರತಿಕ್ರಿಯಿಸದ ಅಧ್ಯಕ್ಷ ಜಯಾನಂದ ಗೌಡ ಮಾತನಾಡಿ, ನಗರದಲ್ಲಿ ಎಲ್ಲ ಸದಸ್ಯರ ಸಹಮತ ಇದ್ದೇ ಕಾಮಗಾರಿ ಮಾಡಲಾಗುವುದು. ಜನರ ಅಭಿವೃದ್ಧಿಯೇ ನಮ್ಮ ಉದ್ದೇಶ ಎಂದರು.

ನಗರದಲ್ಲಿ ಬಡವರ ನಿವೇಶನಕ್ಕೆ ಅನುಮತಿ ಇಲ್ಲ ಅದರೂ ಐದು ಅಂತಸ್ಥಿನ ಕಟ್ಟಡಕ್ಕೆ ಅನುಮತಿ ಇದೆ. ವಿಕಲಚೇತನರಿಗೆ, ವಯೋ ವೃದ್ಧರು ಹೇಗೆ ಕಟ್ಟಡದ ಮೇಲೆ ಹತ್ತಬೇಕು. ಇದಕ್ಕೆ ಅಧ್ಯಕ್ಷ ಜಯಾನಂದ ಗೌಡ ಉತ್ತರಿಸಿ, ಈ ಬಗ್ಗೆ ಅಡಳಿತ ಪಕ್ಷದ ಹಸ್ತಕ್ಷೇಪ ಇಲ್ಲ. ಕಾನೂನು ಎಲ್ಲರಿಗೆ ಒಂದೇ. ಈ ಬಗ್ಗೆ ಪಕ್ಷ ಬೇಧ ಮರೆತು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು. ನಗರದ ತ್ಯಾಜ್ಯ ನೀರು ನದಿಗೆ ಹೋಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಚರಂಡಿ ನೀರು ಹೋಗದ ಸ್ಥಿತಿ ಬೆಳ್ತಂಗಡಿ ನಗರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ನೆಪದಲ್ಲಿ ನೂರಾರು ಅಂಗಡಿ ನೆಲಸಮ ಆಗುತ್ತಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಉತ್ತರಿಸಿದ ಇಂಜಿನಿಯರ್ ಇದು ಸರ್ಕಾರದ ಅಧಿಸೂಚನೆ ಎಂದರು. ಇದರಿಂದ ತೃಪ್ತರಾಗದ ಸದಸ್ಯರು ಯಾವ ಸರ್ಕಾರದ ಸೂಚನೆ ಇರಲಿ ಜನರ ಬದುಕು ಮುಖ್ಯ. ಈ ಬಗ್ಗೆ ಪಕ್ಷಾತೀತ ಹೋರಾಟ ನಡೆಸಬೇಕು ಎಂದರು.

ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್, ಇಂಜಿನಿಯರಿಂಗ್ ಮಹಾವೀರ ಅರಿಗ, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net