

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
ಪ್ರತೀ ವರ್ಷವೂ ಪಶ್ಚಿಮಟ್ಟದಿಂದ ರಭಸವಾಗಿ ಹರಿದು ಬರುವ ಪ್ರವಾಹದಿಂದ ನದಿದಂಡೆ ಕೊಚ್ಚಿಹೋಗಿ ಕೃಷಿ ಭೂಮಿಯನ್ನು ಕೂಡಾ ನುಂಗಿ ತನ್ನ ಒಡಲಿಗೆ ಹಾಕಿಕೊಂಡು ನೂರಾರು ಎಕರೆ ಭೂಮಿನಾಶವಾಗುವ ಹಂತದಲ್ಲಿದೆ ಬಂಡೀಮಠದ ಭಾಗದಲ್ಲಿ ಹರಿಯುವ ಸೀತಾನದಿಯ ಉತ್ತರ ಭಾಗ.
ಶ್ರೀ ನೀಲಾವರಶ್ರೀ ಮಹಿಷಮರ್ಧಿನಿ ದೇವಸ್ಥಾನದಿಂದ 1 ಕಿ.ಮೀ.ಪಶ್ಚಿಮದಲ್ಲಿ ಸೀತಾನದಿ 2 ತಿರುವು ಪಡೆಯುತ್ತದೆ. ಕಳೆದ ಹಲವಾರು ವರ್ಷದಿಂದ ಮಳೆಗಾಲದಲ್ಲಿ ಬರುವ ಭಾರೀ ಪ್ರವಾಹದ ಸೆಳೆತಕ್ಕೆ ಬಾವಲಿಕುದ್ರುವಿನ ಉತ್ತರಭಾಗದಲ್ಲಿರುವ ಈ ನದಿ ದಂಡೆ ವರ್ಷದಿಂದ ವರ್ಷಕ್ಕೆ ಕುಸಿದು ಬಿದ್ದು ನದಿ ಸವೆತಕ್ಕೆ ರೈತರು ನೆಟ್ಟ ಬೃಹತ್ ಮರಗಳು ನದಿಪಾಲಾಗಿ ಸವೆತದ ಭೀಕರತೆ ಹೆಚ್ಚಿದೆ.
ಸೀತಾನದಿ, ಸ್ವರ್ಣನದಿ, ಮಡಿಸಾಲುವಿನಲ್ಲಿ ಉಪ್ಪೂರು, ಬಾರಕೂರು, ನಲ್ಕುದ್ರು ಇದೀಗ ಬೆಣ್ಣೆಕುದ್ರು ಸೇರಿದಂತೆ ಅನೇಕ ಕಡೆಯಲ್ಲಿ ಪ್ರವಾಹದಿಂದ ನದಿದಂಡೆ ಸವೆತ ಕಂಡು ಬರದಿದ್ದರೂ ಸರ್ಕಾರದ ಅನುದಾನದಿಂದ ಭದ್ರವಾದ ಬಂಡೆಕಲ್ಲುಗಳನ್ನು ಕಟ್ಟಿ ಅದರಲ್ಲಿ ರಸ್ತೆ ನಿರ್ವಾಣ ವಾಡಿ ಸಂಚಾರಕ್ಕೆ ಮತ್ತು ಕೃಷಿ ಭೂಮಿಗೆ ನೀರು ನುಗ್ಗದಂತೆ ಕಾಮಗಾರಿಗಳು ನಡೆದಿದೆ. ಆದರೆ ಕೃಷಿ ಭೂಮಿ ಹೊಂದಿದ ನದಿ ತೀರ ಪ್ರದೇಶಗಳ ಸಮಸ್ಯೆಯನ್ನು ಕೇಳುವವರೇ ಇಲ್ಲ.
ನೀಲಾವರ, ಬಾರಕೂರು, ಕುಂಜಾಲು, ಚೇರ್ಕಾಡಿ, ಹನೆಹಳ್ಳಿ ಸೇರಿದಂತೆ ನಾಲ್ಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುವ ಸೀತಾ ನದಿಯ ಉತ್ತರ ಭಾಗ ಕುಂದಾಪುರ ವಿಧಾನಸಭಾ ಕ್ಷೇತ್ರವಾದರೆ ದಕ್ಷಿಣ ಭಾಗ ಉಡುಪಿ ವಿಧಾನಸಭಾ ಕ್ಷೇತ್ರದ್ದಾಗಿದೆ. ಹನೆಹಳ್ಳಿ ಗ್ರಾಮ ಪಂಚಾಯಿತಿಯು ನದಿಸವೆತದ ತೀರಾ ಗಂಭೀರ ಸಮಸ್ಯೆಯನ್ನು ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ವಾಹಿತಿ ನೀಡಿತ್ತು. ಆದರೆ ಸಮಸ್ಯೆ ಪರಿಶೀಲನೆಗೆ ಯಾವ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಬಂದಿಲ್ಲ.
ಉತ್ತಮ ಕೃಷಿಯ ಈ ಭೂಪ್ರದೇಶ ಇತ್ತೀಚಿನ ಕೆಲವು ವರ್ಷದಿಂದ ಮಳೆಗಾಲದ ಪ್ರವಾಹವು ಸರಿಯಾಗಿ ನೀರು ಹರಿದು ಹೋಗದೆ ಕೃಷಿ ಭೂಮಿಯಲ್ಲಿ ದಿನಗಟ್ಟಲೆ ನೀರು ನಿಂತು ನಾಟಿ ಕೊಳೆತು ಹಾಳಾಗುವ ಕಾರಣ ಅನೇಕ ರೈತರು ಭತ್ತದ ಬೆಳೆಯನ್ನು ವಾಡುವುದನ್ನು ಕೈಬಿಟ್ಟಿದ್ದಾರೆ.
ಹನೆಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕೂರಾಡಿ ಭಾಗದಿಂದ ಕಿಂಡಿಅಣೆಕಟ್ಟು ತನಕ ಸೀತಾನದಿಯ ಉತ್ತರಭಾಗದ ನದಿದಂಡೆಯನ್ನು ಕಟ್ಟಿ ಕೃಷಿಭೂಮಿ ನೀರುಪಾಲಾಗುವ ಅಪಾಯ ತಪ್ಪಿಸುವಂತೆ ಅಧಿಕಾರಿಗಳಿಗೆ ಮತ್ತು ಕುಂದಾಪುರ ಶಾಸಕರಿಗೆ ಮನವಿ ವಾಡಲಾಗಿದೆ. -ಉಮೇಶ್ ಕಲ್ಯಾಣಪುರ. ಕಾರ್ಯದರ್ಶಿ ಹನೆಹಳ್ಳಿ ಗ್ರಾಮ ಪಂಚಾಯಿತಿ ಸೀತಾನದಿಯ ಹನೆಹಳ್ಳಿ ಗ್ರಾಮದ ಕೂರಾಡಿ ಮತ್ತು ಬಂಡೀಮಠ ತನಕದ ಉತ್ತರ ಭಾಗದ ನದಿ ಸವೆತ ಕುರಿತು ಸ್ಥಳ ಪರಿಶೀಲನೆ ವಾಡಿ ಅಂದಾಜು ವರದಿ ವಾಡಿ ಇಲಾಖೆ ಗಮನಕ್ಕೆ ತರುತ್ತೇವೆ. -ಸುಧಾಕರ ಶೆಟ್ಟಿ, ಉಡುಪಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಕಳೆದ 15 ವರ್ಷದಿಂದ ಮಳೆಗಾಲದಲ್ಲಿ ಬರುವ ಭಾರೀ ಪ್ರವಾಹ ಮತ್ತು ದಿನಗಟ್ಟಲೆ ನೀರು ನಿಂತು ಕೃತಕ ನೆರೆಬಂದು ಕೊಳೆತು ಹೋಗುತ್ತಿರುವುದು, ಕೃಷಿ ಭೂಮಿಯಲ್ಲಿ ನೀರು ನಿಂತು ನಾಟಿ ವಾಡಿದ ಭತ್ತದ ಸಸಿ ಕೊಳೆತು ಹೋಗುತ್ತಿರುವ ಕಾರಣ ಸಾವಿರಾರು ರೂ. ಕೃಷಿಯಿಂದ ಮತ್ತಷ್ಟು ನಷ್ಟವಾಗುತ್ತಿರುವುದಕ್ಕೆ ಕೃಷಿಯನ್ನು ಬಿಟ್ಟಿದ್ದೇವೆ. -ಗಣಪತಿ ಆಚಾರ್ಯ, ಕೃಷಿಕ https://www.vijayavani.net/more-encouragement-is-needed-for-students-education https://www.vijayavani.net/helps-to-overcome-mobile-addiction