

ಮುಧೋಳ: ಡಾ.ಬಾಬು ಜಗಜೀವನ ರಾಂ ಅವರು ಸಮಾಜದಲ್ಲಿ ಪರಿವರ್ತನೆ ತರಲು ಪ್ರಯತ್ನಿಸಿದ್ದವರು. ಅಂದೇ ಸಮಾಜದಲ್ಲಿ ಹೆಚ್ಚಿನ ಸಮಸ್ಯೆ ಎದುರಿಸಿ ಸಮಾಜದಲ್ಲಿ ಅಸ್ಪಶ್ಯತೆ ಹೋಗಲಾಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ತಹಸೀಲ್ದಾರ್ ಮಹದೇವ ಸನಮುರಿ ಹೇಳಿದರು.
ನಗರದ ಡಾ.ಬಿ.ಅರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ 118ನೇ ಜಯಂತಿಯಲ್ಲಿ ಮಾತನಾಡಿದರು.
ದೀನ ದಲಿತರ ಆಶಾಕಿರಣವಾಗಿದ್ದ ಬಾಬೂಜಿ ಉಪಪ್ರಧಾನಿಯಾಗಿ ಕೃಷಿ ಕ್ಷೇತ್ರಕ್ಕೆ ನೀಡಿದ್ದ ಅವಿಸ್ಮರಣೀಯ ಕೊಡುಗೆಯಿಂದಾಗಿ ಹಸಿರು ಕ್ರಾಂತಿಯ ಹರಿಕಾರರೆಂದು ಹೆಸರಾಗಿದ್ದರು. ನೊಂದವರ, ಶೋಷಣೆಗೊಳಗಾದವರ ದನಿಯಾಗಿದ್ದರು ಎಂದರು.
ಡಾ.ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವುದರ ಮೂಲಕ ಮೆರವಣೆಗೆಗೆ ಹನುಮಂತ ತಿಮ್ಮಾಪೂರ ಚಾಲನೆ ನೀಡಿದರು. ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಭವನಗಳ ಸಂಕೀರ್ಣ ತಲುಪಿತು.
ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಎಪಿಎಂಸಿ ಉಪಾಧ್ಯಕ್ಷ ಭೀಮಪ್ಪ ಮೆಟಗುಡ್ಡ, ತಹಸೀಲ್ದಾರ್ ಮಹಾದೇವ ಸನಮುರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ, ಮೋಹನ್ ಕೋರಡ್ಡಿ, ಸದಾಶಿವ ಮೇತ್ರಿ, ಭೀಮಸಿ ಮೇತ್ರಿ, ಸುನಿಲ ಕಂಬೋಗಿ, ಅನಿಲ್ ಬರಗಿ, ಸತೀಶ್ ಗಾಡಿ, ಕೃಷ್ಣಾ ಸಣ್ಣಪ್ಪಗೊಳ, ಭೀಮರಾವ ಕಾಳವಗೋಳ, ಸದಾಶಿವ ತಳಗೇರಿ, ಪ್ರಕಾಶ್ ತಳಗೇರಿ, ರವಿ ಕಂದಗನೂರ, ಶಿವಾನಂದ ಮ್ಯಾಗೇರಿ ಇದ್ದರು.
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನುಸನ್ಮಾನಿಸಲಾಯಿತು.