ಗ್ರಹಣ ಹಿನ್ನೆಲೆ ರಾತ್ರಿಯ ಸೇವೆ ಬೆಳಿಗ್ಗೆಯೇ ಮುಕ್ತಾಯ

raichur
raichur
Published on

ರಾಯಚೂರು ರಾಹುಗ್ರಸ್ತ ರಕ್ತ ಚಂದ್ರಗ್ರಹಣ ಹಿನ್ನೆಲೆ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಿತ್ಯ ಪೂಜೆ ಉತ್ಸವಗಳಲ್ಲಿ ಬದಲಾವಣೆಗಳಾಗಿದ್ದು, ಮಠದಲ್ಲಿ ಮಧ್ಯಾಹ್ನದಿಂದ ತರ‍್ಥ ,ಪ್ರಸಾದ ಬಂದ್ ಅಯಿತು.

ಎಂದಿನಂತೆ ಭಾನುವಾರ ಶ್ರೀ ರಾಯರ ವೃಂದಾವನ ರ‍್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದ್ದು, ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತರ‍್ಥರು ಮೂಲರಾಮದೇವರ ಪೂಜೆಯನ್ನು ನೆರವೇರಿಸಿದರು.

ಶ್ರೀಮಠದಲ್ಲಿ ಎಲ್ಲಾ ಪೂಜೆ, ಉತ್ಸವ, ಸೇವೆಗಳು, ಸಂಸ್ಥಾನ ಪೂಜೆ, ಪಾದ ಪೂಜೆ, ಪ್ರಸಾದ ಸೇರಿದಂತೆ ರಾತ್ರಿ ನಡೆಯುವ ಕರ‍್ಯಕ್ರಮಗಳನ್ನು  ಪ್ರಾಂಗಣದಲ್ಲಿ ನಡೆಯುವ ವಿವಿಧ ರಥೋತ್ಸವ, ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ ಮಧ್ಯಾಹ್ನ ೧೨:೩೦ ಕ್ಕೆ ಪರ‍್ಣಗೊಳಿಸಿದರು. ಗ್ರಹಣ ಕಾಲದಲ್ಲಿ ಮಠದಲ್ಲಿ ಗ್ರಹಣ ಶಾಂತಿ ಹೋಮ, ಗ್ರಹಣ ಮುಕ್ತಾಯ ಬಳಿಕ ರಾಯರ ವೃಂದಾವನಕ್ಕೆ ಜಲಾಭಿಷೇಕ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net