ನೂತನ ರೆಕಾರ್ಡ್​ ರೂಂ ರಾಜ್ಯಕ್ಕೆ ಮಾದರಿ

kgfff
Published on

ಕೆಜಿಎಫ್​: ಕೆಜಿಎಫ್​ನಲ್ಲಿ ನೂತನ ತಾಲೂಕು ಆಡಳಿತ ಸೌಧ ನಿಮಾರ್ಣ ಮಾಡಿರುವುದರಿಂದ ಇಲ್ಲಿನ ರೆಕಾರ್ಡ್​ ರೂಂ (ಅಭಿಲೇಖಾಲಯ) ಇಡೀ ರಾಜ್ಯಕ್ಕೆ ಮಾದರಿಯನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್​.ರವಿ ಹೇಳಿದರು.

ನಗರದ ತಾಲೂಕು ಕಚೇರಿಗೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಗೊಳಿಸುವುದು ರಾಜ್ಯ ಸರ್ಕಾರದ ಮಹತ್ವಾಕಾಂೆಯ ಯೋಜನೆಯಾಗಿದ್ದು, ಎಲ್ಲ ತಾಲೂಕು ಕಚೇರಿಗಳ ಅಭಿಲೇಖಾಲಾಯಗಳಲ್ಲಿ ಸ್ಕಾನಿಂಗ್​ ಮಾಡಲಾಗುತ್ತಿದೆ. ಕೆಜಿಎಫ್​ನಲ್ಲಿಯೂ ಸ್ಕಾ$ನಿಂಗ್​ ಪ್ರಕ್ರಿಯೆ ನಡೆಯುತ್ತಿದ್ದು, ಪರಿಶೀಲನೆ ನಡೆಸುವ ಉದ್ದೇಶದಿಂದ ಭೇಟಿ ನೀಡಿ, ಕೆಲವು ಮಹತ್ವ ಸಲಹೆ ನೀಡಲಾಗಿದೆ.

ಕಂದಾಯ ಇಲಾಖೆ ಅಧಿಕಾರಿಗಳು ತಹಸೀಲ್ದಾರ್​ರಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ಧವಿರುತ್ತಾರೆ. ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಾರ್ವಜನಿಕ ಸಂದರ್ಶನದ ಸಮಯದಲ್ಲಿ ನೇರವಾಗಿ ತಹಸೀಲ್ದಾರ್​ರನ್ನು ಭೇಟಿಯಾಗಿ ಪರಿಹಾರ ಪಡೆಯಬಹುದಾಗಿದ್ದು, ಮಧ್ಯವರ್ತಿಗಳ ಮೂಲಕ ವ್ಯವಹರಿಸುವ ಅಗತ್ಯವಿಲ್ಲ ಎಂದರು.

ತಮ್ಮ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಬೇರೆಯವರ ಮಾತು ನಂಬಿ ಮೋಸ ಹೋಗಬೇಡಿ. ಕೆಜಿಎಫ್​ ಕ್ಷೇತ್ರದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಕಡು ಬಡವರು ಇದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಬೇಕಿರುವುದು ನಮ್ಮ ಕರ್ತವ್ಯ. ಮಧ್ಯವರ್ತಿಗಳು

ಮೋಸ ಮಾಡುತ್ತಾರೆ ಎಚ್ಚರದಿಂದಿರಬೇಕು ಎಂದರು.

ರೆಕಾರ್ಡ್​ ರೂಂನಲ್ಲಿ ದಾಖಲೆಗಳ ಡಿಜಿಲಿಕಣ ಮಾಡಲು ಸಿಬ್ಬಂದಿ ಕೊರತೆ ಇರುವುದಾಗಿ ತಹಸೀಲ್ದಾರ್​ ನಾಗವೇಣಿ ಗಮನಕ್ಕೆ ತಂದಿದ್ದು, ಈಗ ಇರುವ 6 ಸಿಬ್ಬಂದಿ ಜತೆಗೆ ಇನ್ನೂ ನಾಲ್ಕು ಸಿಬ್ಬಂದಿ ನಿಯೋಜನೆ ಮಾಡಿಕೊಂಡು ಒಟ್ಟು ತ್ವರಿತಗತಿಯಲ್ಲಿ ಡಿಜಿಟಲೀಕರಣ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಿದರು.

ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿರುವುದಾಗಿ ದೂರು ಬಂದಿರುವುದರಿಂದ ಜಾತಿ ಪ್ರಮಾಣ ಪತ್ರ ಬೇಕಿರುವವರು ತಮ್ಮ ಕುಟುಂಬದ ಸದಸ್ಯರ ವಿವರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಜಾತಿ ಪ್ರಮಾಣ ಪತ್ರ ಪಡೆಯಲು ನೋಟರಿ ಮಾಡಿಸಿದ ಸ್ವಯಂ ಘೋಷಣಾ ಪ್ರಮಾಣ ಪತ್ರ ಮಾನದಂಡವಾಗಿರುವುದಿಲ್ಲ. ಕುಟುಂಬದ ಹಿರಿಯರಿಗೆ ಸಂಬಂಧಿಸಿದ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದ್ದು, ಪರಿಶೀಲನೆ ವೇಳೆ ಸಲ್ಲಿಸುವಂತೆ ಸೂಚಿಸಿದರು. ತಹಸೀಲ್ದಾರ್​ ನಾಗವೇಣಿ, ಶಿರಸ್ತೇದಾರ ಮಂಜುನಾಥ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net