ಸದ್ಯದಲ್ಲೇ ಜಾರಿಗೊಳ್ಳಲಿದೆ ನೂತನ ಸಹಕಾರ ನೀತಿ

nrp vssn
ಎನ್.ಆರ್.ಪುರ ತಾಲೂಕು ಸೀತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಸಭೆಯನ್ನು ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ಉದ್ಘಾಟಿಸಿದರು. ಬಿ.ಎಸ್.ಶ್ರೀನಿವಾಸ್, ಎಚ್.ವಿ.ಸಂದೀಪ್‌ಕುಮಾರ್, ಎನ್.ಪಿ.ರವಿ, ಎಸ್.ಉಪೇಂದ್ರರಾವ್, ಎಚ್.ಎನ್.ಸತಿಶ್, ಇ.ಡಿ.ಮಂಜುನಾಥ್ ಇತರರಿದ್ದರು.
Published on

ಎನ್.ಆರ್.ಪುರ: ಕೇಂದ್ರ ಸರ್ಕಾರ ಮುಂದಿನ 2-3 ತಿಂಗಳಲ್ಲಿ ನೂತನ ಸಹಕಾರ ನೀತಿ ಜಾರಿಗೆ ತರಲಿದೆ ಎಂದು ಸೀತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ತಿಳಿಸಿದರು.

ಬುಧವಾರ ಸೀತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿ, ಸರ್ಕಾರ ಒಳ್ಳೆಯ ಆಶಯ, ದೂರದೃಷ್ಟಿ ಇಟ್ಟುಕೊಂಡು ಕಾಯ್ದೆ ಜಾರಿಗೊಳಿಸಲಿದೆ. ಈ ಹಿಂದೆ ಕೇದ್ರ ಸರ್ಕಾರದ ಕೃಷಿ ಮಂತ್ರಾಲಯದ ಖಾತೆ ಜತೆಗೆ ಸಹಕಾರ ಖಾತೆ ಸೇರಿತ್ತು. ಈಗ ಅದನ್ನು ಬೇರ್ಪಡಿಸಿ ಸಹಕಾರ ಖಾತೆಯನ್ನು ಸ್ವತಂತ್ರವಾಗಿ ಮಾಡಲಾಗಿದೆ ಎಂದರು.
ಸರ್ಕಾರದ ಆದೇಶದಂತೆ ಸಂಘದ ಹೆಸರು ಬದಲಾಯಿಸಿದ್ದೇವೆ. ಸಾಲ ಶೇ.100 ವಸೂಲಾತಿಗೆ ಪ್ರಯತ್ನ ನಡೆಸಿದ್ದೇವೆ. ಸಂಘದಲ್ಲಿ 1504 ಸದಸ್ಯರಿದ್ದಾರೆ. 305 ಸದಸ್ಯರು ಠೇವಣಿ ಇಟ್ಟಿದ್ದಾರೆ. ಬೆಳ್ಳೂರು, ಈಚಿಕೆರೆ, ಮೂಡುಬಾಗಿಲು ಶಾಖೆಯಲ್ಲಿ 881 ಸದಸ್ಯರು ಇದ್ದಾರೆ. 76,62,993 ರೂಪಾಯಿ ದಿನಸಿ ವ್ಯಾಪಾರ ಮಾಡಿದ್ದಾರೆ. ಶೂನ್ಯ ಬಡ್ಡಿ ದರದಲ್ಲಿ 513 ಸದಸ್ಯರು ಸಾಲ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಸೀತೂರು ಶಾಖೆಯಲ್ಲಿ ಅತಿ ಹೆಚ್ಚು ವ್ಯಾಪಾರ ಮಾಡಿದ ಟಿ.ಕೆ.ಕಾರ್ತಿಕ್, ಬೆಳ್ಳೂರು ಶಾಖೆಯಲ್ಲಿ ಎಂ.ಎಸ್.ನಾಗೇಂದ್ರ, ಈಚಿಕೆರೆ ಶಾಖೆಯಲ್ಲಿ ಎನ್.ಬಿ.ಲಕ್ಷ್ಮೀನಾರಾಯಣ, ಮೂಡಬಾಗಿಲು ಶಾಖೆಯಲ್ಲಿ ಎಚ್.ಪಿ.ಶಿವಣ್ಣಗೌಡ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾತೂರು ಗ್ರಾಮದ ಎಚ್.ಎಸ್.ಶರದಿ, ಕೊನೋಡಿ ಗ್ರಾಮದ ಎಚ್.ವಿ.ಕರಣ್, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಬೆಳ್ಳೂರು ಗ್ರಾಮದ ವಿ.ನಿರಂಜನ, ಜಿ.ಎಸ್.ಶ್ರಾವಣಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಉಪಾಧ್ಯಕ್ಷ ಬಿ.ಎಸ್.ಶ್ರೀನಿವಾಸ್, ನಿರ್ದೇಶಕರಾದ ಎಚ್.ವಿ.ಸಂದೀಪಕುಮಾರ್, ಎನ್.ಪಿ.ರವಿ, ಎಸ್.ಉಪೇಂದ್ರರಾವ್, ಎಚ್.ಎನ್.ಸತೀಶ್, ಇ.ಡಿ.ಮಂಜುನಾಥ್, ವೈ.ಜಿ.ವಿಜೇಂದ್ರ, ಎಂ.ಎಸ್.ಗೀತಾ, ಸುಶೀಲಮ್ಮ, ಜಿ.ಕೆ.ಜಯರಾಮ್, ವಿಷ್ಣುಮೂರ್ತಿ, ಪಿ.ಕೆ.ಬಸವರಾಜ್, ತಿಮ್ಮಪ್ಪ, ಬೆಮ್ಮನೆ ಮೋಹನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net