

ರೋಣ: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನ ವರ್ಗಾವಣೆಗೊಂಡಿದ್ದು, ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಆರ್. ಎನ್. ಹುರಳಿ ಅಧಿಕಾರ ಸ್ವೀಕರಿಸಿದ್ದಾರೆ. ಅವರಿಗೆ ರೋಣ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸ್ವಾಗತಿಸಿ ಗೌರವಿಸಿ ಸನ್ಮಾನಿಸಲಾಯಿತು. ತಾಲೂಕಾಧ್ಯಕ್ಷ ವೈ.ಡಿ. ಗಾಣಿಗೇರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷೆ ಬಿ.ಎನ್. ಕ್ಯಾತನಗೌಡ್ರ, ಪ್ರಧಾನ ಕಾರ್ಯದರ್ಶಿ ಸಿ.ಕೆ. ಕೇಸರಿ, ಮಹೇಶ ಕುರಿ, ಎಂ.ವೈ. ಜಕ್ಕರಸಾನಿ, ಬಿ.ಎಸ್. ಹಿರೇಮಠ, ಜಡ್.ಡಿ. ದಳವಾಯಿ, ಎಂ.ಜೆ.ಪುರದ, ಸಿ.ಎಸ್. ಜೋಗರೆಡ್ಡಿ, ಎಸ.ಬಿ. ಗವಿ, ಎನ್.ಎನ್. ಕ್ಯಾತನಗೌಡ್ರ, ಇತರರಿದ್ದರು.