

ಮುಧೋಳ:ಸದಾ ಹಚ್ಚ ಹಸಿರಿನಿಂದ ಕಂಗೊಳಿಸುವ ನಾಡು ಮುಧೋಳ. ಕೃಷಿ, ವ್ಯಾಪಾರ, ಔದ್ಯೋಗಿಕ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಲ್ಲಿ ಮಹತ್ತರ ಸಾಧನೆ ಮಾಡಿದೆ. ಆದರೇ ಕಳೆದ 4&5 ವರ್ಷಗಳಿಂದ ಪ್ರವಾಹ ಎನ್ನುವ ಸಂಕಟ ಜೀವ ಹಿಂಡುತ್ತಿದೆ.!!ಹೌದು, ಪ್ರತಿ ವರ್ಷ ಮಳೆಗಾಳ ಆರಂಭವಾದರೇ ಸಾಕು ಪ್ರವಾಹ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಮಹಾರಾಷ್ಟ್ರ, ಬೆಳಗಾವಿಯಲ್ಲಿ ಕುಂಭದ್ರೋಣ ಮಳೆ ಆರಂಭವಾಗುತ್ತಿದ್ದಂತೆ ಮುಧೋಳ ಭಾಗದ ಜನರಿಗೆ ಆತಂಕವೇ ಮನೆ ಮಾಡುತ್ತದೆ. ಒಂದು ಸಾರಿ ಬಂದು ಹೋಗುವ ಪ್ರವಾಹ ಕೇವಲ ಕೃಷಿ ಕ್ಷೇತ್ರಕ್ಕೆ ಅಷ್ಟೆ ಇನ್ನಿತರ ಕ್ಷೇತ್ರದ ಮೇಲೆಯೂ ಅಡ್ಡ ಪರಿಣಾಮ ಉಂಟು ಮಾಡುತ್ತಿದೆ.
ಪ್ರವಾಹಕ್ಕೆ ತುತ್ತಾಗುವ ಕೃಷಿ ಕ್ಷೇತ್ರವು ಬೇರೆ ಬೇರೆ ಕ್ಷೇತ್ರಕ್ಕೆ ಬಿಸಿ ತಟ್ಟುವಂತೆ ಮಾಡಿದೆ. ಪ್ರವಾಹದಿಂದ ನಷ್ಟ ಉಂಟಾಗುವ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ರೈತಾಪಿ ವರ್ಗ ಸಾಲಕ್ಕೆ ಮೊರೆಯಿಡುವುದು ಸಾಮಾನ್ಯವಾಗಿ ಬೀಡುತ್ತದೆ. ಅಲ್ಲದೇ ಇನ್ನಿತರ ಖರ್ಚು, ವೆಚ್ಚಗಳಿಗೆ ಕಡಿವಾಣ ಹಾಕುತ್ತಾರೆ. ಇದರಿಂದ ಪರಿಣಾಮ ವ್ಯಾಪಾರ ವಹಿವಾಟು, ಸಿಮೆಂಟ, ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಔದ್ಯೋಗಿಕ ವಲಯವು ಬಹಳಷ್ಟು ತೊಂದರೆ ಸಿಲುಕುತ್ತದೆ.ಕಬ್ಬಿನ ಇಳುವರಿ ಕುಂಠಿತವಾಗುವ ಪರಿಣಾಮ ಸಕ್ಕರೆ ಕಾರ್ಖಾನೆಗಳು ನಿಗಧಿ ಗುರಿ(ಕಬ್ಬು ಕ್ರಷಿಂಗ್) ತಲುಪಲು ಹಾಗೂ ಗುಣಮಟ್ಟದ ಸಕ್ಕರೆ ಪಡೆಯುವಲ್ಲಿ ವಿಫಲವಾಗುತ್ತೀವೆ.
ಬೇರೆ ಜಿಲ್ಲೆ, ರಾಜ್ಯಗಳಿಂದ ಕಬ್ಬು ಆಮದು ಮಾಡಿಕೊಂಡು ಕಾರ್ಖಾನೆಗಳು ಸರಿದೂಗಿಸಿಕೊಂಡು ಹೋಗಬೇಕು. ಇಲ್ಲವಾದಲ್ಲಿ ಕಾರ್ಖಾನೆ ಸ್ಥಗಿತಗೊಳಿಸಬೇಕು. ಇನ್ನು ಪ್ರತಿ ಶುಕ್ರವಾರ ಮುಧೋಳ ಮಾರುಕಟ್ಟೆ ಹಾಗೂ ತಾಲೂಕಿನ ವಿವಿಧೆಡೆ ನಡೆಯುವ ಮಾರುಕಟ್ಟೆಗಳು ಜನರು ಇಲ್ಲದೇ ಬಣಗೂಡುತ್ತವೆ. ನಷ್ಟದ ಪರಿಣಾಮ ಸಾರ್ವಜನಿಕರು, ರೈತರು ಮಾರುಕಟ್ಟೆಯತ್ತ ಸುಳಿಯುವುದೇ ಇಲ್ಲ. ಅನೇಕ ಸಾರಿ ಅಂಗಡಿಕಾರರು ತೀವ್ರ ಲಾಸ್ ಅನುಭವಿಸಿದ್ದಾರೆ.
ಪ್ರವಾಹದ ಹೊಡೆತಕ್ಕೆ ಹೈನೋದ್ಯಮಕ್ಕೂ ತೀವ್ರ ಸಮಸ್ಯೆ ಎದುರಿಸುತ್ತದೆ. ಶ್ರೀಮಂತ ರೈತರು ಹೇಗೋ ಬಚಾವ್ ಆಗುತ್ತದೆ. ಮಧ್ಯಮ, ಬಡ ವರ್ಗದ ಜನರು ದಿಕ್ಕು ತೋಚದಂತಾಗಿದ್ದಾರೆ. ಸರ್ಕಾರ ನೀಡುವ ಪರಿಹಾರ ಯಾತಕ್ಕೂ ಸಾಲುವದಿಲ್ಲ. ಹೀಗಾಗಿ ಪ್ರವಾಹದ ಕರಿನೆರಳಿಗೆ ಹೆದರಿ ಅನೇಕ ರೈತರು ಜಮೀನು ಮಾರಾಟಕ್ಕೂ ಮುಂದಾಗಿದ್ದು ಕಾಣಸಿಗುತ್ತದೆ. ಒಟ್ಟಾರೆ ಪ್ರವಾಹ ಎನ್ನುವ ಸಂಕಟ ಕೊನೆ ಇಲ್ಲದಂತಾಗಿದೆ.
ಯಾವಾಗ ಯಾವಗ ಪ್ರವಾಹ
2005, 2019, 2020,2021 ಹಾಗೂ 2024ರಲ್ಲಿ ಮಹಾ ಮಳೆಯಿಂದ ನದಿ ತೀರದ ಜನರು ಅನುಭವಿಸಿದ ಸಂಕಟ, ನೋವು, ಯಾತನೆ ಅಪಾರ. ನದಿಗಳ ನೀರಿನ ಹರಿವಿನ ಪ್ರಮಾಣ ಶರವೇಗದಲ್ಲಿ ಹೆಚ್ಚಳವಾಗುತ್ತದೆ. ಹೀಗಾಗಿ ಣ ಣಕ್ಕೂ ಟಪ್ರಭಾ ನದಿಯ ನೀರಿನ ಹರಿವಿನ ಪ್ರಮಾಣದಲ್ಲಿ ಏರಿಕೆ ಯಾಗಿ ನದಿ ತೀರದ ಜನರಲ್ಲಿ ನಡುಕು ಹುಟ್ಟಿಸುವುದು ಸಾಮಾನ್ಯವಾಗಿದೆ. ನದಿ ತೀರ ಪ್ರದೇಶದಲ್ಲಿ ಜಮೀನಿನಲ್ಲಿಯೇ ಸಹಸ್ರಾರು ಜನರು ವಾಸವಿದ್ದು, ನದಿ ನೀರಿನ ಬಳಕೆ ಮಾಡಿಕೊಂಡು ಕೃಷಿ ಮಾಡುತ್ತಾರೆ. ಜೊತೆಗೆ ಎಮ್ಮೆ, ಹಸು, ಮೇಕೆ ಸಾಕಿ ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುವವರಿಗೆ ಪ್ರತಿ ವರ್ಷ ಬರುವ ಪ್ರವಾಹ ಇಲ್ಲಿನ ಜನರ ಜಂಘಾಬಲವನ್ನೆ ಕುಸಿಯುವಂತೆ ಮಾಡಿದೆ.
ಟಪ್ರಬಾ ನದಿಯು 40 ಸಾವಿರ ಕ್ಯೂಸೆಕ್ ದಾಟಿದರೇ ಸಾಕು ತನ್ನ ಆರ್ಭಟ ಶುರುವಿಟ್ಟುಕೊಳ್ಳುತ್ತದೆ. ಪ್ರಸಕ್ತ ವರ್ಷ ಅ.19 ರಂದು 43672 ಕ್ಯೂಸೆಕ್, ಅ.20 ರಂದು 65567 ಕ್ಯೂಸೆಕ್, ಅ 21 ರಂದು, 58126 ಕ್ಯೂಸೆಕ್, ಅ.22 ರಂದು 45890 ಕ್ಯೂಸೆಕ್, ಅ.23 14900 ಕ್ಯೂಸೆಕ್, ಅ.24 14500 ಕ್ಯೂಸೆಕ್ಸ್ ಅ.25 9437 ಕ್ಯೂಸೆಕ್ ನೀರು ಹರಿದ ಪರಿಣಾಮ ತಾಲೂಕಿನ ಹನ್ನೊಂದು ಬ್ಯಾರೇಜ್ಗಳು ಮುಳುಗಿ ಹೋಗಿವೆ. ಒಳ ಹರಿವು ಕಡಿಮೆಯಾಗಿದ್ದರು ನದಿಯಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಆದರೇ ಸೋಮವಾರ ಸಂಜೆ ವೇಳೆ ಮುಧೋಳ&ಯಾದವಾಡ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.
ಕಳೆದ ನಾಲ್ಕು ದಿನಗಳಿಂದ 23 ಗ್ರಾಮಗಳ ಸಂಚಾರ ಕಳೆದುಹೋಗುವಂತೆ ಮಾಡಿದ ಮುಧೋಳ&ಯಾದವಾಡ ರಸ್ತೆ ಸಂಚಾರ ಸೋಮವಾರ ಸಂಚೆ ದ್ವಿಚಕ್ರ ಹಾಗೂ ಕಾರುಗಳಿಗೆ ಅವಕಾಶ ನೀಡಿದೆ. ಬುಧವಾರ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ನೀರಿನ ಮಟ್ಟ ನಿಧಾನವಾಗಿ ಇಳಿಮುಖವಾಗುತ್ತಿದೆ. ಸಾರ್ವಜನಿಕರು ಎಚ್ಚರದಿಂದ ಇರಬೇಕು.
ಎ.ಕೆ.ಮಾಚನೂರ ಲೋಕೋಪಯೋಗಿ ಇಲಾಖೆ ಎಇಇ
ಮುಧೋಳ ಯಾದವಾಡ ಸೇತುವೆ ಸಂಚಾರಕ್ಕೆ ಮುಕ್ತವಾಗಿರುವುದು.