

ವಿಜಯಪುರ : ನಮ್ಮ ಭಾರತೀಯ ಧ್ವಜವು ಭಾರತದ ಶ್ರೀಮಂತ ಪರಂಪರೆ ಮತ್ತು ಸ್ವಾತಂತ್ರಕ್ಕಾಗಿ ಅದರ ಹೋರಾಟ, ಸತ್ಯ, ಶಾಂತಿ, ತ್ಯಾಗ, ಬಲಿದಾನ ಹಾಗೂ ಅಹಿಂಸೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರೊ. ಎಂ.ಎಸ್. ಖೊದ್ನಾಪೂರ ಹೇಳಿದರು.
ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ ವಿಭಾಗದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಧ್ವಜ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಧ್ವಜ ದಿನವನ್ನು ಪ್ರತಿಯೊಂದು ಶಾಲೆ& ಕಾಲೇಜುಗಳಲ್ಲಿ ಆಚರಿಸುವ ಮೂಲಕ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಯುವಕರಿಗೆ ರಾಷ್ಟ್ರ ಧ್ವಜದ ಇತಿಹಾಸ, ಮಹತ್ವ ಮತ್ತು ಸಾಂಕೇತಿಕತೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ರಾಷ್ಟ್ರದ ಸ್ವಾತಂತ್ರ ಹೋರಾಟದಲ್ಲಿ ಹೋರಾಡಿದ ವೀರ ಮಹನೀಯರ ತ್ಯಾಗ ಮತ್ತು ಬಲಿದಾನ ಸ್ಮರಿಸುವುದು ಈ ದಿನದ ಆಚರಣೆಯ ಪ್ರಮುಖ ಧ್ಯೇಯವಾಗಿದೆ ಎಂದರು.
ವಿ.ಆರ್. ಕಬಾಡೆ, ಆರ್.ಐ. ಜೋಗೂರ, ಪ್ರಕಾಶ ಸಣ್ಣಕ್ಕಿ, ಈರಣ್ಣ ಹಟ್ಟಿ, ಕಿರಣ ಚವ್ಹಾಣ ಮತ್ತಿತರರಿದ್ದರು.
* ಫೋಟೋ : ಎಂಎಂ 23&3
ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಧ್ವಜ ದಿನದ ಕಾರ್ಯಕ್ರಮದಲ್ಲಿ ಪ್ರೊ. ಎಂ.ಎಸ್. ಖೊದ್ನಾಪೂರ ಮಾತನಾಡಿದರು. ವಿ.ಆರ್. ಕಬಾಡೆ, ಆರ್.ಐ. ಜೋಗೂರ, ಪ್ರಕಾಶ ಸಣ್ಣಕ್ಕಿ ಹೇಳಿದರು.