ಅಂಬೇಡ್ಕರ್​ ಹೆಸರೇ ಅಭಿಮಾನದ ಸಂಕೇತ

20 Jaggu 5
Published on

ಬೆಳಗಾವಿ: ಅತ್ಯಂತ ಕಷ್ಟದಲ್ಲಿ ಓದಿ ದೇಶಕ್ಕೆ ಮಾದರಿ ಸಂವಿಧಾನ ನೀಡಿರುವ ಡಾ.ಬಾಬಾ ಸಾಹೇಬ ಅಂಬೇಡ್ಕರ್​ ಹೆಸರೇ ಅಭಿಮಾನದ ಸಂಕೇತ ಎಂದು ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಹೇಳಿದರು.

ತಾಲೂಕಿನ ಗೋಜಗಾ ಗ್ರಾಮದ ಅಂಬೇಡ್ಕರ್​ ಗಲ್ಲಿಯಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್​ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಹಿಳೆಯರು ಸ್ವತಂತ್ರವಾಗಿ ಓಡಾಡುತ್ತಿದ್ದರೆ, ಹಕ್ಕಿನಿಂದ ಮಾತನಾಡುತ್ತಿದ್ದರೆ, ಮಹಿಳೆಯರಿಗೆ ಸಮಾನತೆ ಸಿಕ್ಕಿದ್ದರೆ, ಅದು ಡಾ.ಅಂಬೇಡ್ಕರ್​ ಅವರ ಸಂವಿಧಾನದಿಂದ. ಮಹಿಳೆಗೂ ಜೀವವಿದೆ. ಅಧಿಕಾರ ನಡೆಸುವ ಹಕ್ಕಿದೆ ಎಂದು ಪ್ರತಿಪಾದಿಸಿ, ಸಂವಿಧಾನದಲ್ಲಿ ಅವಕಾಶ ನೀಡಿದ ಡಾ.ಅಂಬೇಡ್ಕರ್​ ಅವರು ಆಧುನಿಕ ಬಸವಣ್ಣ ಎಂದರು.

ಮುಂದಿನ ಪೀಳಿಗೆಗೆ ಡಾ.ಬಿ.ಆರ್​.ಅಂಬೇಡ್ಕರ್​ ಅವರ ಜೀವನ ತಿಳಿಸುವ ಉದ್ದೇಶದಿಂದ ಎಲ್ಲೆಡೆ ಅಂಬೇಡ್ಕರ್​ ಪುತ್ಥಳಿ, ಅಂಬೇಡ್ಕರ್​ ಭವನ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಮಕ್ಕಳಿಗೆ ಮಹಾನ್​ ವ್ಯಕ್ತಿಗಳು ಆದರ್ಶವಾಗಬೇಕು ಎನ್ನುವ ಕಾರಣದಿಂದ ಅಂಬೇಡ್ಕರ್​ ಸೇರಿ ಎಲ್ಲ ಮಹಾನ್​ ವ್ಯಕ್ತಿಗಳ ಪುತ್ಥಳಿ ಸ್ಥಾಪಿಸಲಾಗುತ್ತಿದೆ ಎಂದರು.

ಕಾಂಗ್ರೆಸ್​ ಯುವ ಮುಖಂಡ ಮೃಣಾಲ ಹೆಬ್ಬಾಳ್ಕರ್​, ಯುವರಾಜ ಕದಂ, ಮಹೇಶ ಕಾಂಬಳೆ, ಶಿವಾಜಿ ಯಳಗೆ, ಪದ್ಮರಾಜ ಪಾಟೀಲ, ಕಲ್ಲಪ್ಪ ಕಾಂಬಳೆ, ಪರಶು ನಾಯ್ಕ್​, ಪುಂಡಲೀಕ ಬಾಂದುರ್ಗೆ, ಲಲಿತಾ ಪಾಟೀಲ, ಶಂಕರ ಸುತಾರ, ದುರ್ಗಪ್ಪ ದೇವಣ್ಣವರ, ರಾಜಶ್ರೀ ತೋರೆ, ವಿಷ್ಣು ಕಾಂಬಳೆ, ಪಿಡಿಒ ಜಂಬಗಿ, ಜ್ಯೋತಿಬಾ ಚೌಗುಲೆ, ಯುವರಾಜ ಪ್ರಭಾಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net