ಶ್ರಾವಣ ಮಾಸದ ಪುರಾಣ ಮಹಾ ಮಂಗಲ

Site inspection with officials, steps taken to beautify Taj Bawadi memorial
The Eightfold Path of Donation and Puja Festival
Published on

ವಿಜಯಪುರ : ನಗರದ ತೇಕಡೆ ಗಲ್ಲಿ ಬಳಿಯ ಸಿದ್ಧೇಶ್ವರ ಸಂಸ್ಥೆಯ ಬಸವ ಭವನದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಪ್ರವಚನದ ಮಂಗಲೋತ್ಸವ ಆ. 24 ರಂದು ಬೆಳಗ್ಗೆ 11.30 ಕ್ಕೆ ನಡೆಯಲಿದೆ. ಮಂಗಲೋತ್ಸವದ ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಜರುಗಲಿದೆ. ಸಿದ್ಧೇಶ್ವರ ದೇವಸ್ಥಾನ ಆವರಣದ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಅಂಗವಾಗಿ ತಿಂಗಳ ಕಾಲ ನಡೆದ ಗುಡ್ಡಾಪುರ ದಾನಮ್ಮತಾಯಿ ಪುರಾಣ ಕಾರ್ಯಕ್ರಮದ ಮಂಗಲೋತ್ಸವ ಆ. 24 ರಂದು ಸಂಜೆ 7.30 ಕ್ಕೆ ಹಮ್ಮಿಕೊಳ್ಳಲಾಗಿದೆ. ನಂತರ ವೀರಭದ್ರೇಶ್ವರ ಹಾಗೂ ಭದ್ರಕಾಳಿಯ ಕಲ್ಯಾಣ ಮಹೋತ್ಸವ ಜರುಗಲಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಭಾಗವಹಿಸುವಂತೆ ಸಿದ್ಧೇಶ್ವರ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net