

ಶಿಗ್ಗಾಂವಿ: ಹುಬ್ಬಳಿಯಲ್ಲಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದವನಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಯುವತಿ ಕುಟುಂಬದವರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಗಂಗಾಮತ /ಬೆಸ್ತರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಆರೋಪಿ ಬೆದರಿಕೆ ಹಾಕಿರುವ ಕುರಿತು ಅಂಜಲಿ ಸಹೋದರಿ ಹಾಗೂ ಆಕೆಯ ಅಜ್ಜಿ ದೂರು ನೀಡಿದ್ದಾಗಲೇ ಪೊಲೀಸರು ಎಚ್ಚೆತ್ತುಕೊಂಡಿದ್ದರೆ ಅಮಾಯಕಿ ಅಂಜಲಿ ಹತ್ಯೆ ತಪ್ಪಿಸಬಹುದಿತ್ತು. ಪೊಲೀಸರು ಕೊಲೆಗಾರನನ್ನು ಶೀಘ್ರದಲ್ಲಿ ಬಂಧಿಸಿ ಕ್ರೂರ ಶಿಕ್ಷೆ ವಿಧಿಸಬೇಕು. ಅಂಜಲಿ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ ಕೊಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಘಟಕದ ಅಧ್ಯಕ್ಷ ಪರಶುರಾಮ ಸೊನ್ನದ, ರುದ್ರಪ್ಪ ಬಂಕಾಪುರ, ಗಿರೀಶ ಕರ್ಜಗಿ, ವಿರೂಪಾಕ್ಷ ಬಾರಕೇರ, ರಾಮಪ್ಪ ಅಂದಲಗಿ, ಅಣ್ಣಪ್ಪ ಬಾರಕೇರ ಇತರರಿದ್ದರು.