

ಮೈಸೂರು: ಮುಸ್ಲಿಂ ಧರ್ಮಗುರು ಅಕ್ಮಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ.
ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ಬಶೀರ್, ಕೆಎಂಡಿಸಿ ನೂತನ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್, ಬಶೀರ್ ಗೆಳೆಯ ಪರ್ವೀಜ್, ಬಶೀರ್ ಸಹೋದರ ಇಬ್ರಾಹಿಂ, ಬಶೀರ್ ಮಗ ಫೈಝಾನ್ ವಿರುದ್ಧ ಮೃತ ಅಕ್ಮಲ್ ಪತ್ನಿ ನಾಜೀಯಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.
ಮಾ.8ರಂದು ರಾತ್ರಿ 8.20ಕ್ಕೆ ರಾಜೀವನಗರದ 2ನೇ ಹಂತದ ಆರ್ಯ ಬೇಕರಿಯ ಮುಂಭಾಗ ದುಷ್ಕರ್ಮಿಗಳು ನಗರಪಾಲಿಕೆ ಮಾಜಿ ಸದಸ್ಯ ಅಯಾಜ್ ಸಹೋದರ, ಧರ್ಮಗುರುವಾಗಿದ್ದ ಅಕ್ಮಲ್ ಅವರ ಸ್ಕೂಟರ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ತಲೆಯ ಭಾಗಕ್ಕೆ ಹೊಡೆದು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.