ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದ ದಿ.ಮುನಿವೆಂಕಟೇಗೌಡ

23HSN2
Published on

ಹಾಸನ: ವೈದ್ಯ ವೃತ್ತಿಯಷ್ಟೆ ಅಲ್ಲದೆ ಸಮಾಜಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದಿ.ಡಾ.ಎ.ಸಿ.ಮುನಿವೆಂಕಟೇಗೌಡರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಡಾ. ಎ.ಸಿ.ಮುನಿವೆಂಕಟೇಗೌಡ ಚಾರಿಟಬಲ್ ಟ್ರಸ್ಟ್ ಹಾಗೂ ಗೆಳೆಯರ ಬಳಗದಿಂದ ಭಾನುವಾರ ನಗರದ ಸಂಜೀವಿನಿ ಸಹಕಾರಿ ಆಸ್ಪತ್ರೆಯಲ್ಲಿ ಮುನಿವೆಂಕಟೇಗೌಡರ ಸ್ಮರಣಾರ್ಥ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಅತ್ಯಂತ ಆಪ್ತರಾಗಿದ್ದ ಅವರು ಸ್ವಸ್ಥ ಸಮಾಜದ ಸಾಕಾರ ಮೂರ್ತಿಯಾಗಿದ್ದರು. ಮೈಸೂರು, ಕೊಡಗು ಹಾಗೂ ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಸಂಜೀವಿನಿ ಸಹಕಾರಿ ಆಸ್ಪತ್ರೆ ರಾಜ್ಯದಲ್ಲೇ ಉತ್ತಮ ಹೆಸರು ಪಡೆಯಲು ಮುನಿವೆಂಕಟೇಗೌಡರ ಶ್ರಮ ಸಾಕಷ್ಟಿದೆ. ಕೆರೆ ಕಟ್ಟೆಗಳ ಸಂರಕ್ಷಣೆ, ಕಾವೇರಿ ಹೋರಾಟ, ಭ್ರಷ್ಟಾಚಾರ ವಿರೋಧಿ, ಮರಳು ರಕ್ಷಣೆ ವಿಚಾರದಲ್ಲಿ ಅವರು ಕೈಗೊಂಡ ದಿಟ್ಟ ನಿಲುವು ಎಲ್ಲರಿಗೂ ಪ್ರೇರಣೆ ಎಂದರು.

ಹಿರಿಯ ನಾಗರಿಕರಿಗೆ ಗ್ರಂಥಾಲಯ ನಿರ್ಮಿಸಬೇಕೆಂಬುದು ವೈದ್ಯರ ಕನಸಾಗಿತ್ತು. ಆ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗ ಕೆಲಸ ಮಾಡೋಣ ಎಂದರು.

ಜಿಪಂ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್, ಸಮಾಜ ಸೇವಕ ಡಾ.ಗುರುರಾಜ ಹೆಬ್ಬಾರ್, ಡಾ.ಎಸ್.ಸಿ.ಎಂ.ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ವಿಜಯಲಕ್ಷ್ಮೀ ಮುನಿವೆಂಕಟೇಗೌಡ, ಜಿಲ್ಲಾ ರೆಡ್ ಕ್ರಾಸ್ ಅಧ್ಯಕ್ಷ ಎಚ್.ಪಿ.ಮೋಹನ್, ಬಿ.ಆರ್.ಉದಯ್‌ಕುಮಾರ್, ಕಸಾಪ ಜಿಲ್ಲಾ ಗೌರವಾಧ್ಯಕ್ಷ ರವಿ ನಾಕಲಗೂಡು, ಪ್ರಗತಿಪರ ಚಿಂತಕ ಮಂಜುನಾಥ ದತ್ತ, ವೈ.ಎಸ್.ವೀರಭದ್ರಪ್ಪ. ಎಸ್.ಎಸ್.ಪಾಷಾ, ಡಾ.ಅಬ್ದುಲ್ ಬಷೀರ್, ಎಚ್.ಎಂ.ಶಿವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net