ಶ್ವಾನಗಳಿಗೆ ಪಾಲಿಕೆಯಿಂದ ಸಂತಾನಹರಣ ಚಿಕಿತ್ಸೆ

raichur
raichur
Published on

 ರಾಯಚೂರು ನಗರದಲ್ಲಿ ಬೀದಿನಾಯಿ ದಾಳಿ ತಪ್ಪಿಸಲು ಕೊನೆಗೆ ಮಹಾನಗರ ಪಾಲಿಕೆಯಿಂದ ಸಂತಾನಹರಣ ಚಿಕಿತ್ಸೆಗೆ ಮುಂದಾಗಿದ್ದು, ಪಾಲಿಕೆ ಸಿಬ್ಬಂದಿಗಳು ನಾಯಿಗಳು ಹಿಡಿಯಲು ಪ್ರಾರಂಭ ಮಾಡಿದ್ದಾರೆ.

ಪಶು ಇಲಾಖೆ ಅಂಕಿ ಸಂಖ್ಯೆಗಳ ಪ್ರಕಾರ 2,900 ಬೀದಿ ನಾಯಿಗಳು ಇದ್ದವು. ಇದು ಕ್ರಮೇಣ ಜಾಸ್ತಿಯಾಗಿದೆ. ಅಲ್ಲದೇ ಆಟಿ ಬಾರ್ತ್ ಆ್ಯಂಟಿ ಬರ್ತ್ ಕಂಟ್ರೋಲ್ ಪರಿಣಾಮಕಾರಿಯಾಗಿದ ಕಾರಣ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿವೆ. ಹೀಗಾಗಿ ಇತ್ತೀಚೆಗೆ ಬೀದಿ ನಾಯಿಗಳ ಕಡಿತ ಕಂಡು ಬಂದಿದೆ.

ಮಹಾನಗರ ಪಾಲಿಕೆಯಿಂದ ಎನ್‌ಜಿಓ ಮೂಲಕ ಬೀದಿ ನಾಯಿಗಳ ಸಂತಾನಹರಣ ಮಾಡುವುದಕ್ಕೆ, ಪರಿಣಿತ ಹೊಂದಿರುವ ತಂಡದಿಂದ ನಾಯಿ ಹಾವಳಿಯನ್ನು ನಿಯಂತ್ರಿಸಲು ಮುಂದಾಗಿದೆ. ಇದಕ್ಕಾಗಿ 25 ಲಕ್ಷ ರೂಪಾಯಿ ಟೆಂಡರ್ ಕರೆದು, ಬೀದಿ ನಾಯಿಗಳ ಸಂತಾನಹರಣ ಮಾಡಲು ಮುಂದಾಗಿದ್ದು, ನಗರದ 35 ಬಡಾವಣೆಯಲ್ಲಿ ದಿನಕ್ಕೆ 50 ರಿಂದ 60 ನಾಯಿಗಳು ಹಿಡಿದು ಚಿಕಿತ್ಸೆ ಮಾಡಲು ಮುದಾಗಿದ್ದಾರೆ.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net