ಕ್ಷೇತ್ರದ ಅಭಿವೃದ್ಧಿಯತ್ತ ಕೇಂದ್ರದ ಗಮನ ಸೆಳೆದ ಸಂಸದ

ಚಿಕ್ಕಬಳ್ಳಾಪುರದ ಕ್ಷೇತ್ರದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಅವರೊಂದಿಗೆ ಸಂಸದ ಡಾ. ಕೆ.ಸುಧಾಕರ್ ಚರ್ಚಿಸಿದರು.
2
ಚಿಕ್ಕಬಳ್ಳಾಪುರದ ಕ್ಷೇತ್ರದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಅವರೊಂದಿಗೆ ಸಂಸದ ಡಾ. ಕೆ.ಸುಧಾಕರ್ ಚರ್ಚಿಸಿದರು.
Published on

ಗಜೇಂದ್ರ ಸಿಂಗ್ ಭೇಟಿ ಮಾಡಿದ ಡಾ. ಕೆ. ಸುಧಾಕರ್ ಪ್ರವಾಸಿ ತಾಣ, ರೈಲ್ವೆ ಸೌಲಭ್ಯದ ಚರ್ಚೆ



ಚಿಕ್ಕಬಳ್ಳಾಪುರ:
ಪ್ರವಾಸಿ ತಾಣಗಳ ಅಭಿವೃದ್ಧಿ, ರೈಲ್ವೆ ಸೌಲಭ್ಯಗಳ ಹೆಚ್ಚಳ ಸೇರಿ ಲೋಕಸಭಾ ಕ್ಷೇತ್ರದ ಪ್ರಗತಿದಾಯಕ ಕೆಲಸಗಳ ಬಗ್ಗೆ ಸಂಸದ ಡಾ. ಕೆ.ಸುಧಾಕರ್, ಕೇಂದ್ರ ಸರ್ಕಾರದ ಗಮನ ಸೆಳೆಯುವುದನ್ನು ಮುಂದುವರಿಸಿದ್ದಾರೆ.
ಈಗಾಗಲೇ ಕೇಂದ್ರ ಕಾರ್ಮಿಕ ಮತ್ತು ಕ್ರೀಡಾ ಸಚಿವ ಮನಸುಖ್ ಮಾಂಡವೀಯಾ, ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಬೃಹತ್ ಯೋಜನೆಗಳ ಅನುಷ್ಠಾನದ ಬಗ್ಗೆ ಗಮನ ಸೆಳೆದಿದ್ದಾರೆ.
ಪ್ರವಾಸೋದ್ಯಮಕ್ಕೆ ಅಭಿವೃದ್ಧಿಗೆ ಸ್ಪರ್ಶ ನೀಡಲು ಕೇಂದ್ರ ಸರ್ಕಾರದ ಪ್ರಸಾದ್ ಮತ್ತು ಸ್ವದೇಶ್ ದರ್ಶನ್ ಯೋಜನೆಗಳಡಿ ದೇವನಹಳ್ಳಿಯಲ್ಲಿನ ಜೀವವೈವಿಧ್ಯ ತಾಣ, ನಲ್ಲೂರು ಹುಣಸೆತೋಪು, ಶಿವಗಂಗೆ, ದೇವನಹಳ್ಳಿ ಕೋಟೆ, ಆವತಿ ಬೆಟ್ಟ, ವಿದುರಾಶ್ವತ್ಥ, ಮಂಚೇನಹಳ್ಳಿಯ ಮಿಣಕನಗುರ್ಕಿ, ಗುಡಿಬಂಡೆಯ ಸುರಸದ್ಮಗಿರಿ ಬೆಟ್ಟ, ಆವಲಬೆಟ್ಟ, ತಲಕಾಯಲಬೆಟ್ಟ, ಆದಿನಾರಾಯಣಸ್ವಾಮಿ ಬೆಟ್ಟ, ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಸ್ಥಾನ, ಗುಮ್ಮನಾಯಕನಪಾಳ್ಯ ಕೋಟೆ ಹಾಗೂ ದೇವಿಕುಂಟೆ ಕೋಟೆ, ವಲಸೆ ಹಕ್ಕಿಗಳ ಆಶ್ರಯ ತಾಣ ಹೊಸಕೋಟೆಯ ಅಮಾನಿಕೆರೆ ಸೇರಿ ಇತರ ತಾಣಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಂಸದರು ಮನವಿ ಮಾಡಿದ್ದಾರೆ.

ರಂಗಸ್ಥಳ ಅಭಿವೃದ್ಧಿಗೆ 10 ಕೋಟಿ. ರೂ. ನೀಡಲು ಮನವಿ
ವಿಜಯನಗರ ಸಾವ್ರಾಜ್ಯದ ಅರಸರ ಕಾಲದಲ್ಲಿ ನಿರ್ವಾಣವಾದ ರಂಗಸ್ಥಳದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ದುರಸ್ತಿ, ಉದ್ಯಾನ ಅಭಿವದ್ಧಿ, ಸೌರದೀಪ ಅಳವಡಿಕೆ, ಕಲ್ಯಾಣಿ ಅಭಿವದ್ಧಿ ಕೆಲಸಗಳಿಗೆ 10 ಕೋಟಿ ರೂ. ಮಂಜೂರಾತಿಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣರೊಂದಿಗೆ ಹೊಸ ರೈಲ್ವೆ ವಾರ್ಗ, ಅಂತಿಮ ಸ್ಥಳ ಸಮೀಕ್ಷೆ, ವಿದ್ಯುದೀಕರಣ, ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ನಿರ್ವಾಣ, ಉಪನಗರ ರೈಲು ಮೊದಲಾದ ಯೋಜನೆಗಳ ಬಗ್ಗೆ ಚರ್ಚಿಸಿದ್ದಾರೆ. ಈ ಹಿಂದೆ ಕೇಂದ್ರ ಕಾರ್ಮಿಕ ಮತ್ತು ಕ್ರೀಡಾ ಸಚಿವರಿಗೆ ಕ್ಷೇತ್ರದಲ್ಲಿ ಇಎಸ್‌ಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net