ಡ್ರಗ್ಸ್ ಜಾಗೃತಿ ಮೂಡಿಸಲು ಒಂದು ಹೆಜ್ಜೆ ಸಿನಿಮಾ

druk
Published on

ಮಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿದ್ದು, ಇದರ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ‘ಒಂದು ಹೆಜ್ಜೆ’ ಎಂಬ ಸಿನಿಮಾ ನಿರ್ಮಾಣವಾಗಲಿದೆ. ಡ್ರಗ್ಸ್ ಮಾಫಿಯಾ ಸಮಾಜದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುವುದು. ಮಾಫಿಯಾದ ವಿರುದ್ಧ ನಿಷ್ಠಾವಂತ ಅಧಿಕಾರಿಯ ಹೋರಾಟದ ಕತೆಯನ್ನು ಈ ಚಿತ್ರ ಹೊಂದಿರುತ್ತದೆ. ಚಿತ್ರೀಕರಣ ಶೀಘ್ರ ಆರಂಭಗೊಳ್ಳಲಿದೆ ಎಂದು ಚಲನಚಿತ್ರ ನಿರ್ಮಿಸಲಾಗುವುದು ಎಂದು ಚಿತ್ರದ ನಿರ್ದೇಶಕ ಥಾಮಸ್ ಎಂ.ಎಂ. ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚಿತ್ರತಂಡದ ಶಶಿಧರ ದೇವಾಡಿಗ ಉಡುಪಿ, ಪದ್ಮನಾಭ ವೇಣೂರು, ಬಾಲನಟಿ ವಂಶಿಕಾ, ಯುವ ನಟಿ ವಿಸ್ಮಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net