‘ಭರವಸೆ’ ಚಲನಚಿತ್ರ 8ರಂದು ತೆರೆಗೆ

pressmeet
Published on

ಹುಬ್ಬಳ್ಳಿ: ಆರ್‌ಆರ್ ಮೂವಿ ಮೇಕರ್ಸ್ ಬ್ಯಾನರ್‌ನಡಿ ಭರವಸೆ ಚಲನಚಿತ್ರ ನಿರ್ಮಿಸಿದ್ದು, ಆ. 8ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಲೇಡಿಸ್ ಬಾರ್ ಖ್ಯಾತಿಯ ನಿರ್ದೇಶಕ ಎ.ಎನ್. ಮುತ್ತು ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಲನಚಿತ್ರಕ್ಕೆ ನಾನು ನಿರ್ದೇಶನ ಮಾಡಿದ್ದೇನೆ. ಬಿ.ಸಿ. ನಾಗರಾಜ ನಿರ್ಮಾಪಕರಾಗಿದ್ದಾರೆ ಎಂದರು.

ಈ ಚಿತ್ರದಲ್ಲಿ 5 ಹಾಡುಗಳಿದ್ದು, ಹೆಸರಾಂತ ಗಾಯಕರಾದ ವಿಜಯ ಪ್ರಕಾಶ, ರಾಜೇಶ ಕೃಷ್ಣನ್, ಅನುರಾಧ ಭಟ್, ಶಮಿತಾ ಮಲ್ನಾಡ, ಸುಪ್ರಿಯಾ ಲೋಹಿತ್ ಹಾಡಿದ್ದಾರೆ. ಶೀರ್ಷಿಕೆ ತಕ್ಕಂತೆ ಕಥೆ ಇರುವುದು, ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಏನೋ ಒಂದು ಪಡೆದುಕೊಳ್ಳುವುದಕ್ಕೂ ಅಥವಾ ಇನ್ನೇನೋ ಸಾಧಿಸಬೇಕು ಎನ್ನುವ ಭರವಸೆಯಲ್ಲಿ ಬದುಕುತ್ತಾನೆ ಎಂಬುದಿದೆ ಎಂದರು.

ವಿನಯ ರಾಜ್, ಅಹಲ್ಯ ಸುರೇಶ, ನಾಗರಾಜ್ , ಅಮೃತಾ, ಕೆಂಪೇಗೌಡ, ಶೋಭರಾಜ್, ಹೊನ್ನವಳ್ಳಿ ಕೃಷ್ಣ , ಕಿಲ್ಲರ್ ವೆಂಕಟೇಶ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವೀನಸ್‌ಮೂರ್ತಿ ಛಾಯಾಗ್ರಹಣವಿದ್ದು, ಸಂಕಲನವನ್ನು ಕುಮಾರ ಸಿ.ಎಚ್., ಸಾಹಿತ್ಯ ಶ್ರೀತೇಜ, ಅಭಿಜಿತ್ ತೀರ್ಥಳ್ಳಿ, ಬೈರೇಶ, ಸಂಗೀತ ಹರ್ಷ ಕೋಗೋಡ ಮಾಡಿದ್ದಾರೆ ಎಂದು ತಿಳಿಸಿದರು.

ಆರ್. ಚಂದ್ರಶೇಖರ, ಡಾ. ಪ್ರಭು ಗಂಜಿಹಾಳ, ನಿರ್ಮಾಪಕ ಬಿ.ಸಿ. ನಾಗರಾಜ, ಕಲಾವಿದರಾದ ಸಂತೋಷ, ಚನ್ನಬಸಪ್ಪ ಕಾಳೆ, ಮಲ್ಲಿಕಾ, ವೀರೇಶ ಹಂಡಗಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net