2 ಸಾವಿರ ರೂ.ಪಡೆದ ತಾಯಿಗೆ ಮಾತನಾಡುವ ಧೈರ್ಯವಿಲ್ಲ

23-KGLPHOTO-3,,
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 43;
Published on

ಕೊಳ್ಳೇಗಾಲ: ಕಾಂಗ್ರೆಸ್ ನೀಡುವ 2 ಸಾವಿರ ರೂ.ಅನ್ನು ತಾಯಿ ತೆಗೆದುಕೊಂಡರೆ ಮಗಳು ಲವ್ ಜಿಹಾದ್‌ಗೆ ನಡು ರಸ್ತೆಯಲ್ಲಿ ಬಲಿಯಾಗುತ್ತಿದ್ದಾಳೆ. ಇದರಿಂದಾಗಿ ಆ ತಾಯಿಗೆ ಮಾತನಾಡುವ ಧೈರ್ಯವಿಲ್ಲದಂತಾಗಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲೆಬೆಲೆ ಹೇಳಿದರು.

ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಮೋ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ನಮೋ ಭಾರತ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಅಭಿವೃದ್ಧಿ ಯೋಜನೆಗಳ ಕುರಿತು ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಹುಬ್ಬಳಿಯ ನೇಹಾ ಹಿರೇಮಠ ಎಂಬ ಹೆಣ್ಣು ಮಗಳ ಕೊಲೆಯನ್ನು ಸಿಎಂ ವೈಯಕ್ತಿಕ ಜಗಳ ಎನ್ನುತ್ತಾರೆ ಎಂದು ಕಿಡಿಕಾರಿದರು.

ಗ್ಯಾರಂಟಿ ಹಾಗೂ ಅಲ್ಪಸಂಖ್ಯಾತರಿಗೆ ಅನುದಾನ ನೀಡುವ ಸಲುವಾಗಿ ಎಸ್ಸಿ-ಎಸ್ಟಿಗೆ ಮೀಸಲಿಟ್ಟಿದ್ದ ಹಣವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಗ್ಯಾರಂಟಿಗಾಗಿ ಕಾಂಗ್ರೆಸ್ ಸಾಲ ಮಾಡಿದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ ಸಾಲ ಮಾಡಿದ್ದಾರೆ ಎಂದರು.

ಭಾರತವನ್ನು ಮೋದಿ ಎತ್ತರಕ್ಕೆ ಕೊಂಡೊಯ್ದಿದ್ದು, ಏ.26ರಂದು ಜನರು ಅವರಿಗೆ ಧನ್ಯವಾದ ತಿಳಿಸಬಹುದು. 10 ವರ್ಷದಲ್ಲಿ ಕೇಂದ್ರ ಸರ್ಕಾರ ಭ್ರಷ್ಟಾಚಾರ ರಹಿತ ಸರ್ಕಾರ ಆಡಳಿತವೇ ದೇಶದ ಅಪ್ರತಿಮ ಸಾಧನೆ. ಮೋದಿಯಿಂದ ಇಡಿ, ಸಿಬಿಐ ಬಳಕೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದು, ಇದೇ ಇಡಿ, ಸಿಬಿಐ ಕಾಂಗ್ರೆಸ್ ಬಳಿ ಇದ್ದಾಗ 10 ವರ್ಷದಲ್ಲಿ 4 ಸಾವಿರ ಕೋಟಿ ರೂ. ಅಕ್ರಮ ಹಣ ವಶಕ್ಕೆ ಪಡೆಯಲಾಗಿತ್ತು. ಆದರೆ ಬಿಜೆಪಿ ಸರ್ಕಾರ 10 ವರ್ಷದಲ್ಲಿ 1.25 ಲಕ್ಷ ಕೋಟಿ ರೂ.ಹಣವನ್ನು ವಶಕ್ಕೆ ಪಡೆದಿದೆ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ, ಕಾಶಿ ವಿಶ್ವನಾಥ ದೇವಾಲಯ ಸುತ್ತಲೂ ಭವ್ಯವಾದ ಕಾರಿಡಾರ್ ನಿರ್ಮಾಣ, ಅಂಬೇಡ್ಕರ್ ಅವರ 5 ಪುಣ್ಯ ಕ್ಷೇತ್ರಗಳನ್ನು ಪಂಚ ತೀರ್ಥಗಳನ್ನಾಗಿ ಮಾಡಿದ್ದು, ಕರೊನಾವನ್ನು ಸಮರ್ಥವಾಗಿ ಎದುರಿಸಿದ್ದನ್ನು ಗಮನದಲ್ಲಿಟ್ಟುಕೊಂಡು ಜನರು ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಈವರೆಗೂ ಚಾಮರಾಜನಗರದಲ್ಲಿ ಉತ್ತಮರೇ ಆಯ್ಕೆಯಾಗಿದ್ದಾರೆ. ಆದ್ದರಿಂದ ಈ ಬಾರಿ ಎಚ್ಚರಿಕೆಯಿಂದ ಮತ ಚಲಾಯಿಸುವುದು ಅಗತ್ಯ. ನನ್ನ ಜತೆ ಕೆಲಸ ಮಾಡುತ್ತಿದ್ದ ಈ ಕ್ಷೇತ್ರದ ಒಬ್ಬ ತರುಣನ್ನು ಕಳೆದುಕೊಂಡಿದ್ದೇವೆ. ಅಲ್ಲದೆ ತಿ.ನರಸೀಪುರದಲ್ಲಿ ಮರಳು ದಂಧೆಯಿಂದ ನದಿ ಹರಿಯುವುದೇ ನಿಂತಿದೆ. ಸಂಪನ್ಮೂಲವನ್ನು ಹೆಚ್ಚು ಮಾಡುವವರನ್ನು ಬೆಂಬಲಿಸಬೇಕೇ ಹೊರತು ಖಾಲಿ ಮಾಡುವವರನಲ್ಲ ಎಂದರು.

ನಮೋ ಬ್ರಿಗೆಡ್ ಸಂಚಾಲಕ ಅಭಿಷೇಕ್, ವಿಶ್ವ ಹಿಂದು ಪರಿಷತ್‌ನ ನಿರಂಜನ್ ರವಿ, ಕೃಷ್ಣಮೂರ್ತಿ, ರವಿಶಂಕರ್, ನಗರಸಭೆ ಸದಸ್ಯ ಚಿಂತು ಪರಮೇಶ್, ಮುಖಂಡ ದಿನೇಶ್ ಗುಪ್ತ, ಬಸವರಾಜಪ್ಪ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net