ದೇವನಹಳ್ಳಿಯಲ್ಲಿ ತಲೆಎತ್ತಲಿದೆ ಆಧುನಿಕ ರಂಗಮಂದಿರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಸ್ಥಳ ಪರಿಶೀಲನೆ

S.30 dhl Kalakshethra news- ph- 2 A
Published on

ದೇವನಹಳ್ಳಿ: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ಬೆಂಗಳೂರಿನ ಹೊರವಲಯದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ರಂಗಮಂದಿರ ನಿರ್ಮಾಣಕ್ಕೆ ಸರ್ಕಾರ ಸಮ್ಮತಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇದನ್ನು ನಿರ್ಮಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ತಿಳಿಸಿದರು.

ಪಟ್ಟಣದ ಪಾರ್ವಾಟ ಗುಟ್ಟದ ಬಳಿ ಬುಧವಾರ ಸ್ಥಳ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ನಾಡಿನ ಕಲೆ ಸಂಸ್ಕೃತಿ ಉಳಿಸುವ ಕೆಲಸವಾಗಬೇಕು.ರಂಗಮಂದಿರ ನಿರ್ಮಾಣ ಜಾಗಕ್ಕೆ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಈಗಾಗಲೇ ಹಣ ನಿಗದಿಪಡಿಸಿದ್ದಾರೆ. ಕಲೆಯ ಮನಸ್ಸು ಒಗ್ಗುಡಿಸುವ ಸಲುವಾಗಿ ಈ ಪ್ರಯತ್ನವಾಗಿದೆ. ಪಾರಂಪರಿಕ ಕಲೆ ಇತಿಹಾಸಕ್ಕೆ ಆಧುನಿಕತೆಯ ಮೆರುಗು ನೀಡಲು ಸೂಕ್ತ ಜಾಗದ ಹುಡುಕಾಟದಲ್ಲಿದ್ದೇವೆ ಎಂದರು.

ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಮಾತನಾಡಿ, ಬೆಂಗಳೂರಿನ 4 ದಿಕ್ಕುಗಳಲ್ಲಿ 4 ರಂಗಮಂದಿರ ನಿರ್ಮಿಸಲು 2020-21ನೇ ಸಾಲಿನ ಬಜೆಟ್‌ನಲ್ಲಿ 20 ಕೋಟಿ ಹಣ ನಿಗದಿಪಡಿಸಿದ್ದಾರೆ. ದೇವನಹಳ್ಳಿಯ ಪಾರ್ವಟಗುಟ್ಟದ ತಪ್ಪಲಿನ 5 ಎಕರೆ ಜಾಗ ರಂಗಮಂದಿರ ನಿರ್ಮಾಣಕ್ಕೆ ಸೂಕ್ತವಾಗಿ ಕಂಡುಬಂದಿದೆ. ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಹಸಿರು ನಿಶಾನೆ ದೊರೆತರೆ 5 ಕೋಟಿ ರೂ. ವೆಚ್ಚದಲ್ಲಿ ಕಲಾಮಮದಿರ ನಿರ್ಮಾಣವಾಗಲಿದೆ ಎಂದರು.

ನಿರ್ಮಿತಿ ಕೇಂದ್ರದ ಸಹಾಯಕ ಯೋಜನಾ ನಿರ್ದೇಶಕ ರುದ್ರಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net