

ರಬಕವಿ/ಬನಹಟ್ಟಿ: ಜಾಗತಿಕ ಮಟ್ಟದಲ್ಲಿ ಜಾತಿಗಳ ವಿಭಜನೆಯ ಹೋರಾಟದಲ್ಲಿರುವಾಗ ಎಲ್ಲ ಉಪಜಾತಿಗಳನ್ನೊಂಡು ಸಮಸ್ತ ದೈವ ಮಂಡಳ ನಿರ್ವಹಣೆ ಇಂದಿಗೂ ಜೀವಂತವಾಗಿರಿಸಿಕೊಂಡಿರುವ ಬನಹಟ್ಟಿ ಸೋಮವಾರ ಪೇಠ ಸಮಸ್ತ ದೈವ ಮಂಡಳದ ಕಾರ್ಯ ಶ್ಲಾಘನೀಯ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ತಿಳಿಸಿದರು.
ಬನಹಟ್ಟಿಯ ಸೋಮವಾರ ಪೇಟೆಯಲ್ಲಿ ಬುಧವಾರ ದೈವ ಮಂಡಳಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣ ಪ್ರದೇಶದಲ್ಲಿಯೂ ಹಳೆಯ ಸಂಸ್ಕ್ರತಿ ಬೇರನ್ನು ಮತ್ತಷ್ಟು ಗಟ್ಟಿಯಾಗಿಸುವಲ್ಲಿ ದೈವ ಮಂಡಳಿಯ ಸೇವೆ ಪ್ರಾಮುಖ್ಯತೆ ಪಡೆದಿದೆ ಹಾಗೂ ಜನರ ಒಗ್ಗಟ್ಟು ಪ್ರದರ್ಶಿಸುವ ಕಾರ್ಯ ಇದಾಗಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಶ್ರೀಶೈಲ ಬೀಳಗಿ ಮಾತನಾಡಿ, ಎರಡು ಶತಮಾನಗಳ ಇತಿಹಾಸ ಹೊಂದಿರುವ ದೈವ ಮಂಡಳಿಯು ಜನಸಾಮಾನ್ಯರ ಏಳ್ಗೆಯೊಂದಿಗೆ ಇಂದಿಗೂ ನ್ಯಾಯ ದೇವತೆಯಂತೆ ಕೆಲಸ ಮಾಡುತ್ತ ಜನರ ಮನಸಲ್ಲಿ ಅಚ್ಚೊತ್ತಿದೆ. ಸಂಪ್ರದಾಯ ಹಾಗು ಹಬ್ಬಗಳನ್ನು ಮುಂಚೂಣಿ ಪಾತ್ರದೊಂದಿಗೆ ಸಮಾನತೆಯೊಂದಿಗೆ ನಿರ್ವಹಿಸುವ ದೈವ ಮಂಡಳಿ ಕಾರ್ಯ ದೊಡ್ಡದು ಎಂದರು.
ಚರಂತಯ್ಯ ಹಿರೇಮಠ, ಕಲ್ಲಯ್ಯ ಮಠಪತಿ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ತುಂಗಳ, ಸಿದ್ದನಗೌಡ ಪಾಟೀಲ, ಶ್ರೀಶೈಲ ದಭಾಡಿ, ಬ್ರಿಜ್‌ಮೋಹನ ಡಾಗಾ, ಶಂಕರ ಕೆಸರಗೊಪ್ಪ, ಶಿವಲಿಂಗಪ್ಪ ಶಿರಹಟ್ಟಿ, ಶ್ರೀಶೈಲ ಹೊನವಾಡ, ಸಿದ್ದಯ್ಯ ಹಿರೇಮಠ, ಶಂಕರ ಜುಂಜಪ್ಪನವರ, ಶಂಕರ ಜಾಲಿಗಿಡದ, ಶಿವಾನಂದ ಬುದ್ನಿ, ಶಂಕರ ಕೆಸರಗೊಪ್ಪ, ಬಾಳು ಗಣೇಶನವರ, ಬಸವರಾಜ ಬೆಳಗಲಿ, ಸಂಗಣ್ಣ ಗಣೇಶನವರ, ಮಹಾಶಾಂತ ಶೆಟ್ಟಿ, ಮಲ್ಲಣ್ಣ ಕಕಮರಿ, ಕಿರಣ ಆಳಗಿ, ಪ್ರಶಾಂತ ಕೊಳಕಿ, ಹುಚ್ಚಪ್ಪ ಬಾಗೇವಾಡಿ, ಮಲ್ಲು ಬುಟ್ಟಣ್ಣವರ, ಮಲ್ಲಣ್ಣ ಬಾವಲತ್ತಿ, ಚನ್ನಪ್ಪ ಗುಣಕಿ, ರಾಜು ಲುಕ್ಕ ಮತ್ತಿತರರಿದ್ದರು.