ಶಂಕುಸ್ಥಾಪನೆ ನೆರವೇರಿಸದೆ ಹಿಂದಿರುಗಿದ ಶಾಸಕ!

30 bangarpete 1
Published on

ಬಂಗಾರಪೇಟೆ: ಸರ್ಕಾರಿ ಕಟ್ಟಡ ಕಾಮಗಾರಿ ಶಂಕುಸ್ಥಾಪನೆಗೆ ಸರಿಯಾದ ಪ್ರಚಾರ ಮತ್ತು ವ್ಯವಸ್ಥೆ ಮಾಡದ ಕಾರಣ ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪ ವಿಭಾಗ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಆಕ್ರೋಶಗೊಂಡ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಶಂಕುಸ್ಥಾಪನೆ ನೆರವೇರಿಸದೆ ವಾಪಸ್​ ಹೋದ ಪ್ರಸಂಗ ಬುಧವಾರ ನಡೆಯಿತು.

ತಾಲೂಕಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕೊಠಡಿಗಳ ನಿಮಾರ್ಣ ಕಾಮಗಾರಿ ಭೂಮಿಪೂಜೆಗೆ ಶಾಸಕರು ಆಗಮಿಸಿದ್ದರು. ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಸ್ಥಳಕ್ಕೆ ಬಂದ ಶಾಸಕರು, "ಸರಿಯಾದ ಪ್ರಚಾರ ಮಾಡಿಲ್ಲ, ವೇದಿಕೆ ವ್ಯವಸ್ಥೆ ಮಾಡಿಲ್ಲ, ಕನಿಷ್ಠ ಕಾಮಗಾರಿ ಶಂಕುಸ್ಥಾಪನೆಯ ಬ್ಯಾನರ್​ ಸಹ ಹಾಕಿಲ್ಲ, ಕಾಟಾಚಾರಕ್ಕಾಗಿ ಸರ್ಕಾರಿ ಕಾರ್ಯಕ್ರಮ ಆಯೋಜಿಸಿದ್ದೀರಿ' ಎಂದು ಅಸಮಾಧಾನ ವ್ಯಕ್ತಪಡಿಸಿ ಗುದ್ದಲಿಪೂಜೆ ನೆರವೇರಿಸದೆ ಹಿಂತಿರುಗಿದರು.

ಜಿಪಂ ವಿಭಾಗದ ಅಧಿಕಾರಿಗಳು, ಹಲವು ಉಪನ್ಯಾಸಕರು, ಇಬ್ಬರು ಮುಖಂಡರು ಮಾತ್ರ ಆಗಮಿಸಿದ್ದರು. ಟೆಂಡರ್​ ಮೂಲಕ ಗುತ್ತಿಗೆ ಪಡೆದಿರುವ ಕೋಲಾರ ಮೂಲದ ಗುತ್ತಿಗೆದಾರ ನಾರಾಯಣಸ್ವಾಮಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಬೇಕಾಗಿತ್ತು. ಇದು ಗುತ್ತಿಗೆದಾರರ ಜವಾಬ್ದಾರಿ ಸಹ ಆಗಿದೆ ಎಂದು ಜಿಪಂ ಅಧಿಕಾರಿಗಳ ಸಮರ್ಥಿಸಿಕೊಂಡರು. ಗುತ್ತಿಗೆದಾರರು ಪ್ರತಿಕ್ರಿಯೆ ನೀಡಲಿಲ್ಲ. ಜಿಪಂ ಎಇಇ ರವಿಚಂದ್ರ, ಜೆಇ ಶ್ರೀನಿವಾಸ್​, ಸಮಿತಿ ಅಧ್ಯಕ್ಷ ಎಸ್​.ಎ.ಪಾರ್ಥಸಾರಥಿ ಇದ್ದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿಗಳ ನಿಮಾರ್ಣ (ವಿವೇಕ ಯೋಜನೆ) ಅನುದಾನದಡಿ ಸುಮಾರು 1 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಬೇಕಿತ್ತು.

ಕಾಲೇಜು ಕೊಠಡಿಗಳ ನಿಮಾರ್ಣ ಕಾಮಗಾರಿಗೆ ಗುತ್ತಿಗೆದಾರರು, ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡಿಲ್ಲ. 1 ಕೋಟಿ ರೂ. ವೆಚ್ಚದ ಸರ್ಕಾರಿ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮಾಡಿರಬೇಕು. ಅಧಿಕಾರಿಗಳ ಮತ್ತು ಗುತ್ತಿಗೆದಾರರ ರ್ನಿಲಕ್ಷ$್ಯ ಬಗ್ಗೆ ಕ್ರಮ ಜರುಗಿಸಬೇಕು.

- ಷಫೀ

ಪುರಸಭೆ ಸದಸ್ಯ, ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net