

ವಿರಾಜಪೇಟೆ: ಸಂಘ-ಸಂಸ್ಥೆಗಳ ಧ್ಯೇಯೋದ್ದೇಶಗಳು, ಸಾಮಾಜಿಕ ಕಳಕಳಿಯ ಚಟುವಟಿಕೆಗಳು ಸಮಾಜಕ್ಕೆ ಪೂರಕವಾಗಿವೆ ಎಂದು ಲಯನ್ಸ್ ವಲಯ ಪ್ರಾಂತಪಾಲ ಬಿ.ಎಂ.ಭಾರತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಲಯನ್ಸ್ ಕ್ಲಬ್ ಅಮ್ಮತ್ತಿ ಮತ್ತು ಲಯನ್ಸ್ ಕ್ಲಬ್ ಸಿದ್ದಾಪುರ ಜಂಟಿ ಆಶ್ರಯದಲ್ಲಿ ಅಮ್ಮತ್ತಿ ಕೊಡವ ಸಮಾಜದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಾಂತಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಂಘ-ಸಂಸ್ಥೆಗಳನ್ನು ಹುಟ್ಟು ಹಾಕುವುದು ಸುಲಭ. ಆದರೆ, ಸರಿಯಾದ ಪಥದಲ್ಲಿ ನಡೆಸಿಕೊಂಡು ಹೋಗುವುದು ಪ್ರಯಾಸದ ಕೆಲಸ. ಲಯನ್ಸ್ ಕ್ಲಬ್ ವಲಯದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಸಹಯೋಗದಲ್ಲಿ 100 ಜನರಿಗೆ ಕೃತಕ ಕಾಲು ಜೋಡಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಲಯನ್ಸ್ ಕ್ಲಬ್ ಅಮ್ಮತ್ತಿ ಅಧ್ಯಕ್ಷ ಆರತಿ ಕಾರ್ಯಪ್ಪ, ಅಮ್ಮತ್ತಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೃತಿನಾ ಪೂಣಚ್ಚ, ಕುರಿಯನ್ ಜಾರ್ಜ್, ಸುನೀಲ್ ಕುಕ್ಕನೂರು, ಕುಶಾಲಪ್ಪ, ದಿನೇಶ್ ಕೋಡಿರ, ಕೆ.ಎ.ಮಹದೇವಪ್ಪ, ಕೆ.ಬೊಳ್ಳಪ್ಪ, ಬಿ.ಸುಮನ್, ಮೋಹನ್ ದಾಸ್, ಕನ್ನಿಕಾ ಅಯ್ಯಪ್ಪ ಇತರರಿದ್ದರು.