ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ

31 spt 2- sharath kaverappa
Published on

ಸೋಮವಾರಪೇಟೆ: ಡಿ.17ರಂದು ಕಾಣೆಯಾಗಿದ್ದ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಗರ್ವಾಲೆ ಗ್ರಾಮದಲ್ಲೇ ಮಂಗಳವಾರ ಪತ್ತೆಯಾಗಿದೆ.

ಹಾಸನ ಜಿಲ್ಲೆಯ ಆಲೂರು ತಾಲೂಕು, ರಾಜನಹಳ್ಳಿ ನಿವಾಸಿ ಮುಲುವೆರ ಪಿ.ಗಣಪತಿ ಅವರ ಪುತ್ರ ಶರತ್ ಕಾವೇರಪ್ಪ (24) ಶವ ಕೊಳೆತ ಸ್ಥಿತಿಯಲ್ಲಿ ಸೋಮವಾರಪೇಟೆ ಪೊಲೀಸರಿಗೆ ದೊರೆತಿದೆ.

ಡಿ.17ರಂದು ತಾಲೂಕಿನ ಹಾಲೇರಿ ಗ್ರಾಮದಲ್ಲಿರುವ ಕಾಫಿ ತೋಟಕ್ಕೆ ಬಂದಿದ್ದ ಶರತ್, ತನ್ನ ದೊಡ್ಡಪ್ಪನ ಮಗ ಬಿದ್ದಪ್ಪ ಅವರ ಕಾರಿನಲ್ಲಿ ಸೂರ್ಲಬ್ಬಿ ಗ್ರಾಮಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಗರ್ವಾಲೆ ಗ್ರಾಮದ ಮೇದುರ ಹೊಳೆ ಸಮೀಪ ಮಡಿಕೇರಿಯ ಪೊಲೀಸ್ ಕಾನ್ಸ್‌ಟೆಬಲ್ ವಿನೋದ್ ಕುಮಾರ್ ಅವರ ಬೈಕಿಗೆ ಡಿಕ್ಕಿಯಾಗಿತ್ತು. ಕಾನ್ಸ್‌ಟೆಬಲ್ ಕಾಲಿಗೆ ತರಚಿದ ಗಾಯವಾಗಿತ್ತು. ನಂತರ ಭಯಗೊಂಡ ಕಾವೇರಪ್ಪ ಸ್ಥಳದಿಂದ ತೆರಳಿ, ಗರ್ವಾಲೆ ಸೋಮಯ್ಯ ಎಂಬವರ ಮನೆಯಿಂದ ಹಗ್ಗವನ್ನು ಪಡೆದು ದೇವಾಲಯದ ಸಮೀಪದಲ್ಲೇ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ.

ಸೋಮವಾರಪೇಟೆ ಠಾಣಾಧಿಕಾರಿ ಶಿವಶಂಕರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಾವೇರಪ್ಪ ಕಾಣೆಯಾಗಿರುವ ಬಗ್ಗೆ ಪಾಲಕರು ಈ ಹಿಂದೆ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net