ನಾಪತ್ತೆಯಾಗಿದ್ದ ಬಾಲಕಿ ಪತ್ತೆ, ಕಾರಣಿಕ ಮೆರೆದ ಉಜಿರಡ್ಕ ಕೊರಗಜ್ಜ

000 a
Published on

ಸುಬ್ರಹ್ಮಣ್ಯ: ಬೆಂಗಳೂರಿನಿಂದ ಅ.17ರಂದು ನಾಪತ್ತೆಯಾಗಿದ್ದ ಬಾಲಕಿ ಪತ್ತೆಗೆ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಉಜಿರಡ್ಕ ಸ್ವಾಮಿ ಕೊರಗಜ್ಜ ದೈವ ಸಾನ್ನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ದೈವದ ನುಡಿಯಂತೆ ಅ.19ರಂದು ಬಾಲಕಿ ಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಭಾನುವಾರ ಬಾಲಕಿ ಹಾಗೂ ಕುಟುಂಬಸ್ಥರು ಸಾನ್ನಿಧ್ಯಕ್ಕೆ ಬಂದು ಕೊರಗಜ್ಜನ ದರ್ಶನ ಪಡೆದರು.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಜಗನ್ನಾಥ್-ರೇಖಾ ದಂಪತಿಯ ಪುತ್ರಿ ಭಾರ್ಗವಿ ಎಂಬ ಬಾಲಕಿ ನಾಪತ್ತೆಯಾಗಿದ್ದಳು. ಆಕೆ ಪತ್ತೆಗಾಗಿ ಕುಕ್ಕೆ ಸುಬ್ರಹ್ಮಣ್ಯದ ಯುವ ತೇಜಸ್ಸು ಟ್ರಸ್ಟ್ ಕಾರ್ಯಕರ್ತರಾದ ನಿತಿನ್ ಭಟ್ ನೂಚಿಲ ಹಾಗೂ ಸುಹಾಸ್ ನೂಚಿಲ ಅವರ ಮನೆಯವರು ಅ.19ರಂದು ಕೊರಗಜ್ಜ ಸಾನ್ನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಬಾಲಕಿಯು ಸೂರ್ಯ ಉದಯಿಸಿ ಅಸ್ತಮಿಸುವುದರೊಳಗೆ ಸಿಕ್ಕಿದಲ್ಲಿ 48 ದಿನದ ಒಳಗಡೆ ಕೊರಗಜ್ಜನಿಗೆ ಹರಕೆ ರೂಪದಲ್ಲಿ ನರ್ತನ ಸೇವೆ ಕೊಡುವುದಾಗಿ ಪ್ರಾರ್ಥಿಸಿದ್ದರು. ಅದೇ ದಿನ ಸಾಯಂಕಾಲ ಬಾಲಕಿ ಗೋವಾದಲ್ಲಿ ಪತ್ತೆಯಾಗಿದ್ದಳು. ಭಾನುವಾರ ಬಾಲಕಿ, ಕುಟುಂಬಸ್ಥರು ಸಾನ್ನಿಧ್ಯಕ್ಕೆ ಬಂದು ಕೊರಗಜ್ಜನ ದರ್ಶನ ಪಡೆದರು. ಸಾನ್ನಿಧ್ಯದ ಆಡಳಿತದ ಚಿನ್ನಮ್ಮ ಉಜಿರಡ್ಕ, ಸುರೇಶ್ ಉಜಿರಡ್ಕ ಹಾಗೂ ಚರಣ್ ರಾಜ್ ಉಜಿರಡ್ಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net