ರಾಮನ ಬ್ಯಾನರ್ ಹರಿದ ದುಷ್ಕರ್ಮಿಗಳು

hnl
Published on

ಹಾನಗಲ್ಲ: ಶ್ರೀರಾಮನ ಭಾವಚಿತ್ರದ ಬ್ಯಾನರ್ ದುಷ್ಕರ್ಮಿಗಳು ಹರಿದು ಹಾಕಿದ ಘಟನೆ ತಾಲೂಕಿನ ಶಿರಗೋಡ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಘಟನೆಯಿಂದಾಗಿ ಗ್ರಾಮದಲ್ಲಿ ಮಂಗಳವಾರ ಕೆಲಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಹಾನಗಲ್ಲ ಪಿಎಸ್‌ಐ ಯಲ್ಲಪ್ಪ ಹಿರಗಣ್ಣನವರ ಭೇಟಿ ನೀಡಿ, ಪಿಡಿಒ ಸಮ್ಮುಖದಲ್ಲಿ ಬ್ಯಾನರ್ ತೆರವುಗೊಳಿಸಿದ್ದಾರೆ. ಈ ಕುರಿತು ಎರಡೂ ಧರ್ಮದ ಮುಖಂಡರೊಂದಿಗೆ ಚರ್ಚಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ. ಅನ್ಯಕೋಮಿನವರು ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net