ಹೆದ್ದಾರಿಯಲ್ಲಿ ಟಯರ್ ಸಿಡಿದು ಮಿನಿ ಟೆಂಪೋ ಪಲ್ಟಿ

06M.D.R.10
ಮಿನಿ ಟೆಂಪೋ ಟಯರ್ ಸಿಡಿದ ಪರಿಣಾಮ ವಾಹನದಲ್ಲಿದ್ದ ಡ್ರೈ ಫ್ರೂಟ್ಸ್ ಬಾಕ್ಸ್‌ಗಳು ಮದ್ದೂರಿನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚೆಲ್ಲಾಡಿರುವುದು.
Published on

ಮದ್ದೂರು: ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬುಧವಾರ ಮಧ್ಯಾಹ್ನ ಟಯರ್ ಸಿಡಿದು ಮಿನಿ ಟೆಂಪೋ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕೇರಳದಿಂದ ಡ್ರೈ ಫ್ರೂಟ್ಸ್‌ಗಳನ್ನು ತುಂಬಿಕೊಂಡು ಬೆಂಗಳೂರಿಗೆ ತೆರಳುತ್ತಿದ್ದ ಮಿನಿ ಟೆಂಪೋದ ಹಿಂಬದಿ ಟಯರ್ ಸಿಡಿದ ಕಾರಣ ಚಾಲಕನ ನಿಯಂತ್ರಣಕ್ಕೆ ಸಿಗದೆ ಟೆಂಪೋ ಪಲ್ಟಿಯಾಗಿದೆ. ನಂತರ ಡ್ರೈ ಫ್ರೂಟ್ಸ್ ಬಾಕ್ಸ್‌ಗಳು ಹೆದ್ದಾರಿಗೆ ಬಿದ್ದಿದ್ದವು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರ ಠಾಣೆ ಪೊಲೀಸರು ಬಾಕ್ಸ್‌ಗಳನ್ನು ತೆರವುಗೊಳಿಸು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪಟ್ಟಣದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net