

ಹುನಗುಂದ: ವಿದ್ಯಾರ್ಥಿಗಳು ಮೊಬೈಲ್ ಬಳಕೆ ಬಿಟ್ಟು ಅಧ್ಯಯನಶೀಲರಾಗಬೇಕು. ಮೊಬೈಲ್ ಬಳಕೆಯಿಂದ ಮನಸ್ಸು ಹಾಳಾಗುತ್ತದೆ ಎಂದು ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು ಹೇಳಿದರು.
ಪಟ್ಟಣದ ವಿಎಂಎಸ್‌ಆರ್ ವಸದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2023-24ನೇ ಶೈಕ್ಷಣಿಕ ಸಾಲಿನ ಕಾಲೇಜು ಒಕ್ಕೂಟದ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕೋರುವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿದರೆ ಮಾತ್ರ ಉತ್ತಮ ಅಂಕ ಗಳಿಸಬಹುದು. ದುಶ್ಚಟಗಳಿಂದ ದೂರವಿದ್ದು, ನಿತ್ಯ ಲಿಂಗಪೂಜೆ, ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದರು.
ವಿಮವಿವ ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಮಾತನಾಡಿ, ಪಿಯುಸಿ ವಿದ್ಯಾರ್ಥಿಗಳ ಅಂತಿಮ ಘಟ್ಟವಾಗಿದ್ದು. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮವಾಗಿ ಓದಿ ಪ್ರಜ್ಞಾವಂತರಾಗಿ ದೇಶಕ್ಕೆ ಮತ್ತು ಕಾಲೇಜಿಗೆ ಕೀರ್ತಿ ತರಬೇಕು ಎಂದರು.
ಮುದ್ದೇಬಿಹಾಳದ ಎಂಜಿವಿಕೆ ಕಾಲೇಜಿನ ಪ್ರಾಚಾರ್ಯ ಎಸ್.ಕೆ. ಹರನಾಳ ಉಪನ್ಯಾಸ ನೀಡಿದರು.
ಬಸವಚೇತನ ಮಹಾಸ್ವಾಮಿಗಳು, ಪಪೂ ಕಾಲೇಜಿನ ಪ್ರಾಚಾರ್ಯ ಪ್ರೊ. ಎಚ್. ಎಸ್. ಬೋಳಿಶೆಟ್ಟರ, ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ಎಂ.ಎಂ. ಆಲೂರ, ವಿಮವಿವ ಸಂಘದ ನಿರ್ದೇಶಕ ಬಸವರಾಜ ಕೆಂದೂರ, ವೀರಣ್ಣ ಬಳೂಟಗಿ, ವಿಮ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಸಂಗಣ್ಣ ಚಿನಿವಾಲ, ಪ್ರೊ. ಎಸ್.ಎಸ್. ಮುಡಪಲದಿನ್ನಿ, ಪ್ರೊ. ಆರ್.ಎನ್. ಬಿರಾದಾರ, ಪ್ರೊ. ಎ್.ಎಂ. ರಾಮವಾಡಗಿ, ವರ್ಗ ಪ್ರತಿನಿಧಿ ಅನೀಲ ಜಾಧವ ಇದ್ದರು.