

ಶಿಕಾರಿಪುರ: ಶ್ರೀ ಮರಿಯಮ್ಮ ದೇವಿಯು ಶತಮಾನಗಳಿಂದ ಈ ಕ್ಷೇತ್ರದ ಗ್ರಾಮದೇವತೆಯಾಗಿದ್ದು ಅತ್ಯಂತ ಜಾಗೃತಳಾಗಿದ್ದಾಳೆ ಎಂದು ತೊಗರ್ಸಿ ಶ್ರೀ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಶುಕ್ರವಾರ ತಾಲೂಕಿನ ತೊಗರ್ಸಿಯಲ್ಲಿ ಶ್ರೀ ಮರಿಯಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಶ್ರೀ ಮರಿಯಮ್ಮ ದೇವತೆಯು ಅತ್ಯಂತ ಶಕ್ತಿ ದೇವತೆ. ತೊಗರ್ಸಿ ಹಾಗೂ ಸುತ್ತಮುತ್ತಲಿನ ಭಕ್ತರನ್ನು ನಿರಂತರವಾಗಿ ಕಾಯುತ್ತಿದ್ದಾರೆ. ಹಿಂದೆ ಬರಗಾಲ ಮತ್ತು ಭೀಕರ ರೋಗಗಳು ಬಂದಾಗ ಶ್ರೀ ಮರಿಯಮ್ಮ ದೇವಿಗೆ ವಿಶೇಷವಾದ ಆರಾಧನೆ ಮಾಡಲಾಗುತ್ತಿತ್ತು. ದೇವಿ ಆರಾಧನೆಯಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ತೊಗರ್ಸಿ ಕ್ಷೇತ್ರ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದ್ದು ಶ್ರೀ ಮಲ್ಲಿಕಾರ್ಜುನ ಸ್ವಾಮಿಯು ಕ್ಷೇತ್ರ ನಾಥನಾಗಿದ್ದಾನೆ ಎಂದರು.
ಸಾತ್ವಿಕ ಚಿಂತನೆಗಳು ಮತ್ತು ಸದ್ವಿಚಾರಗಳು ದೇವತಾರಾಧನೆಯಿಂದ ಬರುತ್ತವೆ. ನಮ್ಮ ಸಂಪ್ರದಾಯ, ಸದಾಚಾರ, ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಧರ್ಮದ ದಾರಿಯಲ್ಲಿ ನಾವು ಸಾಗಬೇಕು. . ಒಳ್ಳೆಯ ಆಲೋಚನೆಗಳು ನಮ್ಮನ್ನು ಸದಾ ನೆರಳಿನಂತೆ ಹಿಂದೆ ನಿಂತು ಕಾಯುತ್ತವೆ ಎಂದು ಹೇಳಿದರು.
ಶ್ರೀ ಮೃತ್ಯುಂಜಯ ಸ್ವಾಮೀಜಿ, ಗ್ರಾಪಂ ಸದಸ್ಯ ಸುರೇಶ್, ಶಿವಕುಮಾರ್ ಶಾಸ್ತ್ರಿ, ತ್ರಿಲೋಚನ ಶಾಸ್ತ್ರಿ, ಪುಟ್ಟಯ್ಯ ಶಾಸ್ತ್ರಿ, ಅನಿಲ್, ಮರಿಯಪ್ಪ, ಶಿವಯೋಗಿ, ಪರಮೇಶ್ ಇತರರಿದ್ದರು.