ಆಧ್ಯಾತ್ಮಿಕ ಮಾತುಗಳಿಂದ ಮನಸ್ಸು ಸ್ವಚ್ಛ

12-09-Shiva-4
ರಾಯಚೂರಿನ ಮಡಿವಾಳ ಸಮುದಾಯ ಭವನದಲ್ಲಿ ಶ್ರಾವಣಮಾಸದ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಡಾ.ಪರಮೇಶ್ವರಪ್ಪ ಸಾಲಿಮಠ ಮಾತನಾಡಿದರು. ಮುಖಂಡರಾದ ವೀರಭದ್ರಪ್ಪ ಮಟಮಾರಿ, ರಾಜು ಇದ್ದರು.
Published on

ರಾಯಚೂರು: ಆಧ್ಯಾತ್ಮಿಕ ಪ್ರವಚನ ಮತ್ತು ಶರಣರ ಮಾತುಗಳನ್ನು ಕೇಳುವುದರಿಂದ ಮನದಲ್ಲಿನ ಮಾಲೀನ್ಯ ತೊಲಗಿ ಮನಸ್ಸು ಸ್ವಚ್ಛವಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಪರಮೇಶ್ವರಪ್ಪ ಸಾಲಿಮಠ ತಿಳಿಸಿದರು.
ಸ್ಥಳೀಯ ಮಡಿವಾಳ ಸಮುದಾಯ ಭವನದಲ್ಲಿ ಶ್ರಾವಣಮಾಸದ ನಿಮಿತ್ತ ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದಿಂದ ಮಂಗಳವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮನಸ್ಸು ಮಲೀನವಾದರೆ ಕೆಟ್ಟ ಯೋಚನೆ, ಕೆಟ್ಟ ಕೆಲಸಗಳು ನಡೆಯುತ್ತವೆ ಎಂದರು.
ನಾನು ಯಾರು, ಎಲ್ಲಿಂದ ಬಂದಿದ್ದೇನೆ, ಮಾಡಬೇಕಾಗಿದ್ದೇನು, ಹೋಗ ಬೇಕಾಗಿದ್ದು ಎಲ್ಲಿಗೆ ಎನ್ನುವ ಮಾತುಗಳನ್ನು ನೆನಪಿಟ್ಟುಕೊಂಡು ಜೀವನದಲ್ಲಿ ಮುನ್ನಡೆಯಬೇಕು. ಆಧ್ಯಾತ್ಮಿಕತೆ ಜೀವನದ ಭಾಗವನ್ನಾಗಿಸಿಕೊಂಡಾಗ ಮಾತ್ರ ಜೀವನ ಸಮೃದ್ಧವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕ ರಾಘವೇಂದ್ರ ಆಶಾಪುರ, ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ರಶ್ಮಿ, ಶಿಕ್ಷಕ ಶ್ರೀನಿವಾಸ ದೇವಕಾರ, ದಾನಿ ನರಸಪ್ಪಗೆ ಸನ್ಮಾನಿಸಿ, ಗೌರವಿಸಲಾಯಿತು. ನಂತರ ಮಹಿಳೆಯರಿಗೆ ಉಡಿ ತುಂಬು ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ವೀರಭದ್ರಪ್ಪ ಮಟಮಾರಿ, ರಾಜು, ಮಡಿವಾಳ ಮಾಚಿದೇವ ಸಮಾಜದ ಜಿಲ್ಲಾಧ್ಯಕ್ಷ ಜಂಬಣ್ಣ ಯಕ್ಲಾಸಪುರ, ಪದಾಕಾರಿಗಳಾದ ಎ.ಶಾಂತಪ್ಪ, ಯು.ಆಂಜಿನಯ್ಯ, ಎಂ.ಮಹಾದೇವ, ಎ.ಚಂದ್ರಶೇಖರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net