ಕ್ರೀಡೆಗಳಿಂದ ಮನಸ್ಸು ವಿಕಸನ

The mind evolves from sports
ಬೀಳಗಿ ತಾಲೂಕಿನ ಯಡಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಶನಿವಾರ ನಡೆದ ಪುರುಷರ ಅಂತಾರಾಜ್ಯಮಟ್ಟದ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು ಶಾಸಕ ಜೆ.ಟಿ. ಪಾಟೀಲ ಉದ್ಘಾಟಿಸಿದರು. ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಎ. ವಿ. ದೇಸಾಯಿ, ಹಿರಿಯರಾದ ಎಸ್.ಟಿ. ಪಾಟೀಲ, ದೊಡ್ಡಣ್ಣ ದೇಸಾಯಿ, ಸದಾನಂದಗೌಡ ನಂದಗಾವಿ ಇತರರಿದ್ದರು.
Published on

ಬೀಳಗಿ: ಕ್ರೀಡೆಗಳಿಂದ ಯುವಕರ ಸವಾರ್ಂಗೀಣ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ತಾಲೂಕಿನ ಯಡಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಶನಿವಾರ ನಡೆದ ಪುರುಷರ ಅಂತಾರಾಜ್ಯಮಟ್ಟದ ಮುಕ್ತ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆ ಯುವಕರನ್ನು ಶಾರೀರಿಕವಾಗಿ ಬೆಳವಣಿಗೆ ಮಾಡುವುದರೊಂದಿಗೆ ಮನಸ್ಸನ್ನೂ ವಿಕಸನಗೊಳಿಸುತ್ತದೆ ಎಂದರು. ಅದರಲ್ಲಿ ಕಬಡ್ಡಿ ಪಂದ್ಯಾವಳಿಗಳಿಗೆ ರಾಜ್ಯ, ದೇಶ, ಅಂರಾರಾಷ್ಟ್ರೀಯ ಮಟ್ಟಗಳಲ್ಲಿ ಸಾಕಷ್ಟು ಪ್ರೋತ್ಸಾಹವಿದೆ. ಅಲ್ಲದೆ, ಹಲವಾರು ಯುವಕರು ಕ್ರೀಡೆಗಳಿಂದ ತಮ್ಮ ಬದುಕು ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಎ. ವಿ. ದೇಸಾಯಿ, ಹಿರಿಯರಾದ ಎಸ್.ಟಿ. ಪಾಟೀಲ, ದೊಡ್ಡಣ್ಣ ದೇಸಾಯಿ, ಸದಾನಂದಗೌಡ ನಂದಗಾವಿ, ಮೋಹನ ದೇಸಾಯಿ, ರಮೇಶ ಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಬೆನ್ನಪ್ಪ ಬೀಳಗಿ, ಜಿಪಂ ಮಾಜಿ ಸದಸ್ಯ ಮಗಿಯಪ್ಪ ದೇವನಾಳ, ದುಂಡಪ್ಪ ದೇವನಾಳ, ವಿಜಯ ವಾಲಿಕಾರ, ಅರ್ಜುನ ಕಾಂಬಳೆ, ಕಮರಲಿ ನದಾಫ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net