ಸಹಸ್ರಾಧಿಕ ನಾಲಿಕೇರ ಗಣಹವನ 17ರಂದು

SIRSI GANAPATI
Published on

ಶಿರಸಿ: ತಾಲೂಕಿನ ರೇವಣಕಟ್ಟಾದ ಪುರಾಣ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸಹಸ್ರಾಧಿಕ (1008) ನಾಲಿಕೇರ ಗಣಹವನ ಫೆ. 17ರಂದು ನಡೆಯಲಿದೆ ಎಂದು ದೇವಸ್ಥಾನದ ಮೊಕ್ತೇಸರ ವಸಂತ ಟಿ. ಹೆಗಡೆ ಸಿರಿಕುಳಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಅಪರೂಪದ ಕಾರ್ಯಕ್ರಮವಾಗಿದ್ದು, ಬೆಳಗ್ಗೆ ಶ್ರೀ ಗಣಪತಿ ಪ್ರಾರ್ಥನೆ, ಮಧುಪರ್ಕ, ಋತ್ವಿಗರ್ಣನೆ, ನಾಲಿಕೇರ ಗಣಹವನ, ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ವಿಪ್ರಾಶೀರ್ವಾದ, ಮಹಾಸಂತರ್ಪಣೆ ನಡೆಯಲಿದೆ.ಮಧ್ಯಾಹ್ನ 3.30ಕ್ಕೆ ಧರ್ಮಸಭೆ ಜರುಗಲಿದ್ದು, ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ನೀಡುವರು. ಇದೇ ವೇಳೆ ಶ್ರೀ ಗುರುಪಾದುಕಾ ಪೂಜೆ ನೆರವೇರಲಿದೆ. 4 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ ಎಂದರು.

ಪ್ರಮುಖರಾದ ಆರ್.ಡಿ. ಹೆಗಡೆ ಜಾನ್ಮನೆ, ಮಹೇಶ ಹೆಗಡೆ, ಚಂದ್ರಕಲಾ ಹೆಗಡೆ, ರಾಘವೇಂದ್ರ ಹೆಗಡೆ, ಗಜಾನನ ಹೆಗಡೆ, ನಾರಾಯಣ ಭಟ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net