ದಾಸವರೇಣ್ಯರ ಸಂದೇಶಗಳು ದಾರಿದೀಪ

The messages of the Dasavarenyas are a beacon
Published on

ವಿಜಯಪುರ:ಕನ್ನಡ ಭಾಷೆಗೆ ಅತ್ಯಂತ ಗಟ್ಟಿಯಾದ ಇತಿಹಾಸವಿದ್ದು, ಕನ್ನಡದ ಈ ಪವಿತ್ರ ಮಣ್ಣಿನಲ್ಲಿ ಜನಿಸಿದ ನಾವೆಲ್ಲರೂ ನಿಜಕ್ಕೂ ಧನ್ಯರು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.ಕೇಂದ್ರ ಕನ್ನಡ ಸಾಹಿತ್ಯ ಪರಿಷತ್​ ಬೆಂಗಳೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ವಿಜಯಪುರ ಹಾಗೂ ಕನ್ನಡ ಕೃಷಿ ಸಂ ಕೃಷಿ ಮಹಾವಿದ್ಯಾಲಯದ ಸಹಯೋಗದಲ್ಲಿ ನಗರ ಹೊರ ವಲಯದ ಹಿಟ್ಟಿನಹಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಾಸ ಸಾಹಿತ್ಯದ ಚಿಂತನಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಚನ ಸಾಹಿತ್ಯದ ನಂತರದಲ್ಲಿ ಇಡೀ ಕನ್ನಡ ನಾಡಿಗೆ ಕೀರ್ತನೆಗಳ ಮೂಲಕ ಕನ್ನಡ ನಾಡು ನುಡಿಯನ್ನು ಬೆಳಗಿ ಹೋದ ದಾಸವರೇಣ್ಯರು ನೀಡಿದ ಸಂದೇಶಗಳು ಇಂದು ನಮಗೆಲ್ಲ ದಾರಿದೀಪವಾಗಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿ ಅಶೋಕ ಸಜ್ಜನ ಮಾತನಾಡಿದರು.

ಮುತ್ತಗಿಯ ರಾಮ ನರಸಿಂಹ ಗುರುಕುಲದ ಸಂಸತ ಪಂಡಿತ ನರಹರಿ ಆಚಾರ್ಯ ಹಾಗೂ ಶ್ರೀನಿವಾಸಾಚಾರ್ಯ ಜೋಶಿ ಉಪನ್ಯಾಸ ನೀಡಿ, ದಾಸರಾಗಬೇಕಾದರೆ ಸದಾ ಭಗವಂತನ ಸ್ಮರಣೆ ಮಾಡಿ ಭಗವಂತನನ್ನು ಸಾಾತ್ಕರಿಸಿಕೊಳ್ಳುವಂತೆ ಮಾಡುವ ಜಗತ್ತಿನ ಶ್ರೇಷ್ಠ ಸಾಹಿತ್ಯ ದಾಸ ಸಾಹಿತ್ಯವಾಗಿದೆ ಎಂದರು.

ಬನಹಟ್ಟಿಯ ವಿಶ್ರಾಂತ ಪ್ರಾಚಾರ್ಯ ಎಸ್​.ಎಂ. ಶೇಖ ದಾಸ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ದಾಸರ ಕೀರ್ತನೆಗಳ ಮೂಲಕ ಸಾಮಾಜಿಕ ಸಾಮರಸ್ಯ, ಭಕ್ತಿ ಭಾವದ ಬೀಜ ಬಿತ್ತುವ ಮೂಲಕ ನಮ್ಮಲ್ಲಿಯ ಅಜ್ಞಾನ ಕಿತ್ತೊಗೆಯುವಲ್ಲಿ ದಾಸ ಸಾಹಿತ್ಯದ ಕೊಡುಗೆ ಅಪಾರ ಎಂದು ತಿಳಿಸಿದರು.

ಕಸಾಪ ಗೌರವ ಕಾರ್ಯದರ್ಶಿ ಬಿ.ಎಂ. ಪಟೇಲ ಪಾಂಡು, ಕಸಾಪ ಕಾರ್ಯಕಾರಿಣಿ ಪ್ರತಿನಿಧಿ ಜಿ.ಕೆ. ತಳವಾರ, ಬಾಗಲಕೋಟೆ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಕಲಬುರ್ಗಿ ಕಸಾಪ ಅಧ್ಯಕ್ಷ ತೇಗಲತಿಪ್ಪಿ, ವಿಜಯಪುರ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಉಪಸ್ಥಿತರರಿದ್ದರು.ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಕಸಾಪ ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಸ್ವಾಗತಿಸಿದರು. ಡಾ. ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಜಗದೀಶ ಬೋಳಸೂರ ವಂದಿಸಿದರು.

ಜಿ.ಎಸ್​. ಬಳ್ಳೂರ, ರಾಜಕುಮಾರ ಜೊಲ್ಲೆ, ಸಿದ್ರಾಮಯ್ಯ ಲಕ್ಕುಂಡಿಮಠ, ಮಹ್ಹದಗೌಸ ಹವಾಲ್ದಾರ, ಸುರೇಶ ಚಾವಲರ, ಸಂಗಮೇಶ ಜಂಗಮಶೆಟ್ಟಿ, ಸಿದ್ಧರಾಮ ಬಿರಾದಾರ, ಮಹಮ್ಮದ ವಾಲೀಕಾರ ಮತ್ತಿತರರಿದ್ದರು.

ವಿಜಯಪುರ ಹೊರ ವಲಯದ ಹಿಟ್ಟಿನಹಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ದಾಸ ಸಾಹಿತ್ಯದ ಚಿಂತನಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ಡಾ. ಮಹೇಶ ಜೋಶಿ, ಅಶೋಕ ಸಜ್ಜನ, ನರಹರಿ ಆಚಾರ್ಯ ಜೋಶಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net