ಗಿರಿಮಲ್ಲೇಶ್ವರ ಶ್ರೀಗಳ ಸಂದೇಶ ಅರಿಯಲಿ

28Athanigrameen1 SPONCER
Published on

ಅಥಣಿ ಗ್ರಾಮೀಣ: ಜನರಿಗೆ ಆಧ್ಯಾತ್ಮಿಕ ಕಾರ್ಯಗಳಿಂದ ನೆಮ್ಮದಿ ಸಿಗುತ್ತದೆ ಎಂದು ಇಂಚಗೇರಿ ರೇವಣಸಿದ್ಧೇಶ್ವರ ಮಹಾರಾಜರು ನುಡಿದರು.

ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಾಸಬೋಧ ವಿಮಲಬ್ರಹ್ಮ ನಿರೂಪಣೆ ಹಾಗೂ ಸರ್ವಧರ್ಮ ಸಮಾವೇಶ ಸಮಾರೋಪದಲ್ಲಿ ಮಾತನಾಡಿದ ಅವರು, ಶ್ರಾವಣ ಮಾಸದ ಪ್ರವಚನ, ಸತ್ಸಂಗದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ಗ್ರಾಮದ ಗಿರಿಮಲ್ಲೇಶ್ವರ ಮಹಾರಾಜರ ಸಂದೇಶ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕೌಲಗುಡ್ಡದ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿ, ಇಂಚಗೇರಿ ಸಂಪ್ರದಾಯದ ಸರ್ವಧರ್ಮದ ಸಮಾನತೆ ಸ್ತುತ್ಯರ್ಹ ಎಂದರು. ಯಕ್ಕಂಚಿಯ ಗುರುಪಾದ ಸ್ವಾಮೀಜಿ ಮಾತನಾಡಿ, ಪಾಲಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು ಎಂದರು. ಶಶಿಕಾಂತ ಮಹಾರಾಜರು, ಶಶಿಕಾಂತ ಶಿವಣೂರ, ಬಸವರಾಜ ಬುಟಾಳಿ, ಗಿರೀಶ ಮಹಾರಾಜರು, ಶಂಕರಪ್ಪ ಮಹಾರಾಜರು ಮಾತನಾಡಿದರು. ಅಣ್ಣಾಸಾಬ ಬಿಸಲಾಪುರ ದಾಸಬೋಧ ವಾಚಿಸಿದರು.

ಗಿರಿಮಲ್ಲ ಪರಗೊಂಡ, ರಾಯಪ್ಪ ಬೆಳ್ಳಂಕಿ, ಗುರುಬಸಪ್ಪ ಖೋತ, ನಾಗಪ್ಪ ಬೆಳ್ಳಂಕಿ, ಅಣ್ಣಪ್ಪ ಗಲಗಲಿ, ಅಶೋಕ ಬೆಳ್ಳಂಕಿ, ಸಂಗಪ್ಪ ಬಿಸಲಾಪುರ, ಬಸಪ್ಪ ಖೋತ, ಸುರೇಶ ಗಲಗಲಿ, ಅಣ್ಣಪ್ಪ ಪಾಟೀಲ ಚಿದಾನಂದ ಹುಲಸದಾರ, ಮಹಾದೇವ ಗಲಗಲಿ, ಜ್ಞಾನೇಶ್ವರ ಖೋತ, ಶಿವಾನಂದ ಗಲಗಲಿ, ಮಹಾದೇವ ನಾಯಿಕ, ಡಾ. ಮಲ್ಲಪ್ಪ ಚನ್ನಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net