ವಚನ ಸಾಹಿತ್ಯದಲ್ಲಿದೆ ಸಮಾನತೆ ಸಾರುವ ಸಂದೇಶ

21 SHIROL 2
Published on

ಶಿರೋಳ: ಬಸವಾದಿ ಶಿವಶರಣರ ವಚನಗಳಲ್ಲಿ ಸಮಾಜದಲ್ಲಿ ಸಂಘರ್ಷ ತಪ್ಪಿಸಿ ಶಾಂತಿ, ಸೌಹಾರ್ದತೆ, ಸಮಾನತೆ ಸಾರುವ ಸಮಾಜ ಕಲ್ಯಾಣದ ಸಂದೇಶ ವಚನ ಸಾಹಿತ್ಯದಲ್ಲಿ ಅಡಗಿದೆ ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ತೋಂಟದಾರ್ಯ ಮಠದ ಜಾತ್ರೆಯ ಅಂಗವಾಗಿ ಕರ್ನಾಟಕ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ನರಗುಂದ ತಾಲೂಕು, ಗ್ರಾಮ ಘಟಕ ಹಾಗೂ ಗುರುಬಸವ ಜನಕಲ್ಯಾಣ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ವಚನ ಓದು ಅರ್ಥ ವಿವರಣೆ ಸ್ಪರ್ಧೆಯಲ್ಲಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವೀರನಗೌಡ್ರ ಮರಿಗೌಡ್ರ, ಇಂದಿನ ಆಧುನಿಕ ಜಗತ್ತಿನಲ್ಲಿ ನಮ್ಮ ಮನೆ, ಮನ, ಮಕ್ಕಳ್ಳಲ್ಲಿ ಶರಣರ ವಚನಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.

ಮುಖ್ಯ ಅಥಿತಿಯಾಗಿ ರಾಜ್ಯ ವೀರಶೈವ ಲಿಂಗಾಯತ ಮಹಾ ಸಂಘಟನೆ ಅಧ್ಯಕ್ಷ ಸಂತೋಷ ಅಂಗಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜಾತ್ರೆ, ಉತ್ಸವಗಳಲ್ಲಿ ಶರಣರ ವಚನಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಅವಶ್ಯಕ. ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಣಜಿಗ ಸಮಾಜಕ್ಕೆ ಅಭಿನಂದನೆ ಎಂದರು.

ಶಿರೋಳ ತೋಂಟದಾರ್ಯ ಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ನರಗುಂದ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಶಿವಾನಂದ ಶೇಬಣ್ಣವರ, ಗದಗ ಜಿಲ್ಲಾ ಶ್ರೇಷ್ಠ ವರ್ತಕ ಪ್ರಶಸ್ತಿ ಪುರಸ್ಕೃತ ಲಾಲಸಾಬ ಅರಗಂಜಿ, ಚನ್ನಯ್ಯಸ್ವಾಮಿ ಪರ್ವತದೇವರಮಠ, ಪ್ರಭಾಕರ ಉಳ್ಳಾಗಡ್ಡಿ ಮಾತನಾಡಿದರು.

ನರಗುಂದ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಕೆ. ಮರಿಗುದ್ದಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಘಟಕದ ಅಧ್ಯಕ್ಷ ಚಂದ್ರಶೇಖರ ಸೊಬರದ ಅಧ್ಯಕ್ಷತೆ ವಹಿಸಿದ್ದರು. ಬಾಪುಗೌಡ್ರ ತಿಮ್ಮನಗೌಡ್ರ, ಬಸಟೆಪ್ಪ ಮೆಣಸಗಿ, ಮೋಹನ ಪಾಗಿ, ಶಂಕರಗೌಡ ಗಿರಿಯಪ್ಪಗೌಡ್ರ, ಮೈಲಾರಪ್ಪ ಹಿರೇಮನಿ, ಪ್ರವೀಣ ಶೇಲ್ಲಿಕೆರಿ, ಕುಮಾರ ಮರಿಗುದ್ದಿ, ಬಸಟೆಪ್ಪ ಅಂಗಡಿ, ಜಾತ್ರಾ ಸಮಿತಿ ಅಧ್ಯಕ್ಷ ಶಿವಾನಂದ ಯಲಬಳ್ಳಿ, ಶ್ರೀಧರ ಶೀಪ್ರಿ, ಬಸವರಾಜ ಕುರಿ, ಪರಶುರಾಮ ಮಡಿವಾಳರ ಇದ್ದರು. ಶಿಕ್ಷಕ ಬಸವರಾಜ ಪಟ್ಟಣಶೆಟ್ಟಿ, ಪ್ರಶಾಂತ ಶೇಲ್ಲಿಕೆರಿ, ಸಿದ್ದು ಅಂಗಡಿ, ಶರಣಪ್ಪ ಮೆಣಸಗಿ ಕಾರ್ಯಕ್ರಮ ನಿರ್ವಹಿಸಿದರು.

ಹಿರಿಯರ ವಿಭಾಗದಲ್ಲಿ ಬಸವರಾಜ ಶೆಟ್ಟೆಪ್ಪನವರ ಪ್ರಥಮ, ಸ್ನೇಹಾರಾಣಿ ಶೆಲ್ಲಕೆರಿ ದ್ವಿತೀಯ, ನಯನಾ ತರ್ಲಗಟ್ಟಿ ತೃತೀಯ ಹಾಗೂ ಕಿರಿಯರ ವಿಭಾಗದಲ್ಲಿ ಅಪೂರ್ವ ಶೆಟ್ಟೆಪ್ಪನವರ ಪ್ರಥಮ, ಸಮೃದ್ದಿ ಕತ್ತಿಕೈ ದ್ವಿತೀಯ, ಸುನೀತಾ ಹೂಗಾರ ತೃತೀಯ ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net