

ಯಲ್ಲಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಬೆಳಸಲಗೆ ಯಕ್ಷಕಲಾ ಪ್ರತಿಷ್ಠಾನ ಸಂಸ್ಥೆಯ ಆಶ್ರಯದಲ್ಲಿ ತಾಲೂಕಿನ ಕಂಚಗಲ್ಲನಲ್ಲಿ ಶ್ರೀ ದೇವಿ ವಾರ್ಷಿಕ ಕಾರ್ಯಕ್ರಮದ ಪ್ರಯುಕ್ತ ಪಂಚವಟಿ ತಾಳಮದ್ದಲೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ ಹೆಗಡೆ ದಂಟಕಲ್, ಶಶಾಂಕ ಬೋಡೆ, ಮಂಜುನಾಥ ಭಟ್ಟ ದೇವದಮನೆ, ಮದ್ದಲೆಯಲ್ಲಿ ನಾಗಪ್ಪ ಕೋಮಾರ, ಚಂಡೆಯಲ್ಲಿ ಸಂಜಯ ಕೋಮಾರ ಭಾಗವಹಿಸಿದ್ದರು.
ನರಸಿಂಹ ಭಟ್ಟ ಕುಂಕಿಮನೆ, ಶಿವರಾಮ ಭಾಗ್ವತ ಮಣ್ಕುಳಿ, ಶ್ರೀಧರ ಅಣಲಗಾರ, ಗೀತಾ ಹೆಗಡೆ ಬೆಳಸಲಗೆ, ಸುಜಾತಾ ಎಸ್. ಹೆಗಡೆ ದಂಟಕಲ್, ಕಾತ್ಯಾಯಿನಿ ಅತ್ತಿಕೊಪ್ಪ, ನಾಗರತ್ನಾ ಅತ್ತಿಕೊಪ್ಪ ಪಾತ್ರ ನಿರ್ವಹಿಸಿದರು.
ಸಂಘಟಕರಾದ ಶಿವರಾಮ ಭಟ್ಟ ಕಂಚಗಲ್ಲ ಹಾಗೂ ಸುಬ್ರಾಯ ಭಟ್ಟ ಕಂಚಗಲ್ಲ ಕಲಾವಿದರನ್ನು ಗೌರವಿಸಿದರು.