ಮನಸೆಳೆದ ಗಣಪತಿ ವಿಸರ್ಜನೆ ಮೆರವಣಿಗೆ

3yaragatti1
Published on

ಯರಗಟ್ಟಿ: ಪಟ್ಟಣದಲ್ಲಿ ಈ ಬಾರಿ ಸಾರ್ವಜನಿಕ ಗಣೇಶ ಕಮಿಟಿಯವರು ವಿಸರ್ಜನೆ ಮೆರವಣಿಗೆಯಲ್ಲಿ ಅಬ್ಬರದ ಡಿಜೆಯನ್ನು ಬದಲಾಗಿ ಸಾಂಪ್ರದಾಯಿಕ ವಾದ್ಯಗಳನ್ನು ಬಳಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಯರಗಟ್ಟಿ ಪಟ್ಟಣದಲ್ಲಿ ಐದು ಮತ್ತು ಏಳು ದಿನಗಳ ಗಣೇಶ ವಿಸರ್ಜನೆ ಸಮಯದಲ್ಲಿ ಸಂತರ ಭಜನೆ, ಚಂಡೆವಾದ್ಯ, ಕರಡಿಮಜಲು, ಜಾಂಜ್‌ಪಥಕ್, ಬ್ಯಾಂಡ್‌ಸೆಟ್ ಜನರ ಮನಸೆಳೆದವು.

ವೆಂಕಟೇಶ್ವರ ದೇವಸ್ಥಾನದ ಗಣೇಶ ಮಂಡಳಿಯವರು ಜಮಖಂಡಿ ಶಾಲೆಯ ಮಕ್ಕಳ ವಾರಕರಿ ಸಂಪ್ರದಾಯದ ಸಂತರ ಭಜನೆ ತಂಡದಿಂದ ಭಜನೆ ಮತ್ತು ವಿವಿಧ ರೂಪಕಗಳನ್ನು ಪ್ರದರ್ಶಿಸಿದರು. ಇದಕ್ಕೆ ಹಿರಿಯ ಸಂತರು ಸಾಥ್ ನೀಡಿದರು. ಮಂಗಳೂರಿನ ಚಂಡೆವಾದ್ಯದ ತಾಳಕ್ಕೆ ಸಾರ್ವಜನಿಕರು ತಲೆದೂಗಿದರು.

ಯುವ ಮುಖಂಡ ರಮೇಶ ಪಾಟೀಲ, ಸಂತರ ಭಜನೆಗೆ ನತ್ಯ ಮಾಡಿದ ಯುವಕರು ತಮ್ಮನ್ನು ತಾವು ಮರೆತು ತಲ್ಲೀನರಾಗಿದ್ದರು. ರಸ್ತೆ ಉದ್ದಕ್ಕೂ ಇದನ್ನು ಜನರು ನೋಡಿ ಆನಂದಿಸಿದರು. ಇನ್ನು ಮುಂದೆ ಡಿಜೆ ಬಳಕೆ ಬೇಡ ಎಂದು ಹೇಳುವ ಮಟ್ಟಿಗೆ ಯುವಕರು ಬದಲಾಗಿದ್ದು ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net