ರಕ್ತದಾನದಿಂದ ಜೀವದಾನ ಮಾಡಿದ ಪುಣ್ಯ

BLOOD DONATE
Published on

ಅಣ್ಣಿಗೇರಿ: ರಕ್ತದಾನ ಮಾಡುವುದರಿಂದ ಇನ್ನೊಬ್ಬರಿಗೆ ಜೀವ ದಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಮಹಾತ್ಮ ಗಾಂಧಿ ಯುವಕ ಮಂಡಳ ಅಧ್ಯಕ್ಷ ಮಂಜುನಾಥ ಮಾಯಣ್ಣವರ ಹೇಳಿದರು.

ಗಣೇಶ ಚತುರ್ಥಿ ಪ್ರಯುಕ್ತ ಪಟ್ಟಣದ ದಾಸೋಹ ಮಠದಲ್ಲಿ ವತಿಯಿಂದ ಭಾನುವಾರ ಆಯೋಜಿಸಿದ್ದ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಸತತ 17 ವರ್ಷಗಳಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಈ ಸಲ 55 ಜನ ರಕ್ತದಾನ ಮಾಡಿದ್ದಾರೆ. ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾ ವಿದ್ಯಾಲಯದ ವತಿಯಿಂದ ರಕ್ತ ಸಂಗ್ರಹಿಸಲಾಗುತ್ತಿದೆ ಎಂದರು.

ಸಂಘದ ಸದಸ್ಯ ಭರತೇಶ್ ಜೈನ್ ಮಾತನಾಡಿದರು. ಮಹಾಂತೇಶ ತಹಶೀಲ್ದಾರ, ನಾಗರಾಜ ದಳವಾಯಿ, ಬಸವರಾಜ ಅಕ್ಕಿ, ಬಾಬು ಗಾಯಕ್ವಾಡ್, ಚಂದ್ರು ಕರಡಿ, ಪುರದಪ್ಪ ರಾಮನಕೊಪ್ಪ, ಆಸೀಫ್ ಹೊಂಬಳ, ರಮೇಶ ಕರೆಟ್​ನವರ, ಇಮಾಮಸಾಬ್ ನಡಕಟ್ಟಿನ, ಡಿ.ಎಲ್. ಆಡ್ಕಾವ್, ಅಮೃತ್ ಮೀಸಿ, ಸಚಿನ್ ಮುಂಡರಗಿ, ಅಮೃತ ಮರಡ್ಡಿ, ಜಗದೀಶ ಸೋಮಣ್ಣವರ, ವಿ.ವಿ. ಬೆಂತೂರ, ನಾಗು ಕುಬಸದ, ರಾಘು ಅಮಾಗಿ, ಯಲ್ಲಪ್ಪ ಸುಂಕದ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net