

ವಿಜಯಪುರ: ಬಂಥನಾಳದ ಸಂಗನಬಸವ ಸ್ವಾಮೀಜಿ, ಶತಮಾನದ ಸಂತ ಸಿದ್ಧೇಶ್ವರ ಶ್ರೀಗಳು ಮತ್ತು ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ಮಣ್ಣು, ಹೊನ್ನಿಗಾಗಿ ದುಡಿದವರಲ್ಲ. ಅವರು ನಾಡಿನ ಒಳಿತಿಗಾಗಿ ದುಡಿದವರು. ಅಂತಹ ಮಹನೀಯರು ಭೂಮಿ, ಸೂರ್ಯ& ಚಂದ್ರರಿರುವರೆಗೆ ಅಜರಾಮರವಾಗಿ ಇರುತ್ತಾರೆ ಎಂದು ಯರನಾಳ, ಉಕ್ಕಲಿ ಸಂಸ್ಥಾನ ವಿರಕ್ತಮಠದ ಗುರುಸಂಗನಬಸವ ಸ್ವಾಮೀಜಿ ಹೇಳಿದರು.
ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ನಿಯಮಿತ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ನಗರದ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಚನ ಪಿತಾಮಹ ರಾವಬಹಾದ್ದೂರ ಡಾ. ಫ.ಗು. ಹಳಕಟ್ಟಿಯವರ 145ನೇ ಜನ್ಮ ದಿನೋತ್ಸವ ಮತ್ತು ವಚನ ಸಂರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ, ತನಗಾಗಿ ಬದುಕುತ್ತಿರುವವರನ್ನು ನೆನೆಸದೇ, ನಾಡಿಗಾಗಿ ದುಡಿದವರನ್ನು ಸ್ಮರಿಸುವ ಕಾರ್ಯವಾಗಬೇಕು. ಇಂತಹ ಹಿರಿಯರ ಕಾರ್ಯಕ್ರಮಗಳು ಆಗಾಗ ನಡೆಯಲಿ ಎಂದು ತಿಳಿಸಿದರು.
ಅಧ್ಯತೆ ವಹಿಸಿದ್ದ ಸಿದ್ಧೇಶ್ವರ ಬ್ಯಾಂಕಿನ ಅಧ್ಯಕ್ಷ ವಿಜಯಕುಮಾರ ಇಜೇರಿ ಮಾತನಾಡಿ, ಡಾ. ಫ.ಗು. ಹಳಕಟ್ಟಿಯವರು ಸ್ಮರಣಿಯ ಪುಣ್ಯ ಪುರುಷರು. ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂಶೋಧಿಸಿ, ಸಂಸ್ಕರಿಸಿ, ಪ್ರಕಟಿಸಿದ ಭಗೀರಥ ಸಾಹಿತಿಗಳು, ಅವರ ಸೇವೆ ಅಷ್ಟಕ್ಕೆ ಸಿಮಿತವಾಗದೆ ವಚನ ಸಾಹಿತ್ಯವನ್ನು ಮನೆಮನೆಗೆ ತಲುಪಿಸಿದ ಹಳಕಟ್ಟಿಯವರ ಸೇವಾ ಕಾರ್ಯ ಸ್ಮರಣಿಯವಾದದ್ದು ಎಂದರು.
ಬ್ಯಾಂಕಿನ ಉಪಾಧ್ಯಕ್ಷೆ ಸೌಭಾಗ್ಯ ಭೋಗಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಅಶೋಕ ಹಂಚಲಿ ಹಾಗೂ ಉಪ ಪೊಲೀಸ್ ಅಧೀಕ ಬಸವರಾಜ ಯಲಿಗಾರ ಮಾತನಾಡಿದರು. ಬಸವಾದಿ ಶರಣರ ವಚನಗಳನ್ನು ಇಂಗ್ಲಿಷ್ಗೆ ಭಾಷಾಂತರಿಸಿದ ಬಸವರಾಜ ಯಲಿಗಾರ ಹಾಗೂ ವಚನ ಗಾಯನ ಮಾಡಿದ ಸಾ ಹಿರೇಮಠ ತಂಡಕ್ಕೆ ಸನ್ಮಾನಿಸಲಾಯಿತು. ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವಿ.ಸಿ. ನಾಗಠಾಣ, ಜಿಲ್ಲಾ ಶರಣಸಾಹಿತ್ಯ ಪರಿಷತ್ತ ಅಧ್ಯಕ್ಷ ಜಂಬೂನಾಥ ಕಂಚಾಣಿ ವೇದಿಕೆಯಲ್ಲಿದ್ದರು.
ಬ್ಯಾಂಕಿನ ನಿರ್ದೇಶಕರಾದ ಸುರೇಶ ಗಚ್ಚಿನಕಟ್ಟಿ, ಈರಣ್ಣ ಪಟ್ಟಣಶೆಟ್ಟಿ, ವಿಶ್ವನಾಥ ಪಾಟೀಲ (ಮಸಿಬಿನಾಳ), ರಾಜೇಂದ್ರ ಪಾಟೀಲ (ಉಪ್ಪಲದಿನ್ನಿ), ರಮೇಶ ಬಿದನೂರ, ರವೀಂದ್ರ ಬಿಜ್ಜರಗಿ, ವೈಜನಾಥ ಕರ್ಪೂರಮಠ, ಡಾ. ಸಂಜೀವ ಪಾಟೀಲ (ಮುಳವಾಡ), ವಿಜಯ ಜತ್ತಿ. ಕರುಣಾ ಅವರಂಗಬಾದ, ಬೋರಮ್ಮಾ ಗೊಬ್ಬೂರ, ಪ್ರಕಾಶ ಬಗಲಿ, ಗುರುರಾಜ್ ಗಂಗನಹಳ್ಳಿ. ಸಾಯಬಣ್ಣಾ ಭೋವಿ, ಅಮೋಸಿದ್ದ ನಾಯ್ಕೋಡಿ, ಸಂಗನಗೌಡ ಪಾಟೀಲ (ತೊನಶ್ಯಾಳ), ಮಂಜುನಾಥ ಗುಂದಗಿ, ಪ್ರಧಾನ ವ್ಯವಸ್ಥಾಪಕ ಜಗದೀಶ ಕಲ್ಯಾಣಶೆಟ್ಟಿ, ಬ್ಯಾಂಕಿನ ಸಲಹೆಗಾರ ಎಸ್.ಕೆ. ಲೋಣಿ ಮತ್ತಿತರರಿದ್ದರು. ಜಂಬೂನಾಥ ಕಂಚಾಣಿ ಸ್ವಾಗತಿಸಿದರು. ಬಿ.ಕೆ. ಪಾಟೀಲ ನಿರ್ವಹಿಸಿದರು. ಸೌಭಾಗ್ಯ ಭೋಗಶೆಟ್ಟಿ ವಂದಿಸಿದರು.