ಮಹಾನೀಯರ ಸ್ಮರಣೆ ಅಗತ್ಯ

h23-tenginakai
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಉತ್ಸವ ಸಮಿತಿ ವತಿಯಿಂದ ನಗರದಲ್ಲಿ 23ನೇ ವರ್ಷದ ಶಿವ-ಬಸವ ಜಯಂತ್ಯುತ್ಸವವನ್ನು ಭಾನುವಾರ ಉದ್ಘಾಟಿಸಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿ ಮಾತನಾಡಿ, ಜಗತ್ತಿನ ಇಬ್ಬರು ಶ್ರೇಷ್ಠ ಮಹಾಪುರುಷರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಯುವ ಪೀಳಿಗೆ ಇಂಥ ಮಹಾನ್ ನಾಯಕರ ತತ್ತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಂತರ ಅದ್ದೂರಿ ಮೆರವಣಿಗೆ ನಡೆಯಿತು.
ಪ್ರಮುಖರಾದ ಮೋಹನ ಗುರುಸ್ವಾಮಿ, ಆನಂದ ಗುರುಸ್ವಾಮಿ, ಮುಕುಂದ ಗುರುಸ್ವಾಮಿ, ಜಯತೀರ್ಥ ಕಟ್ಟಿ, ಶಿವಾನಂದ ಸತ್ತಿಗೇರಿ, ಮಹಾವೀರ ಗೂಗಿ, ಅಶ್ವಿನ ಹಿರೇಮಠ, ಪವನ ದುಬೆ, ಪ್ರದೀಪ ರೇವಣಕರ, ಸುಬ್ರಹ್ಮಣ್ಯ ಶಿರಕೋಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net